ರಂಗ ಬಾರೋ ಪಾಂಡುರಂಗ ಬಾರೋ
kannadabhajanlyrics.com |
ರಂಗ ಬಾರೋ ಪಾಂಡುರಂಗ ಬಾರೋ
ರಂಗ ಬಾರೋ ನರಸಿಂಗ ಬಾರೋ || ಪ ||
ಕಂದ ಬಾರೋ ಎನ್ನ ತಂದೆ ಬಾರೋ
ಇಂದಿರೆ ರಮಣ ಮುಕುಂದ ಬಾರೋ || ೧ ||
ಅಪ್ಪ ಬಾರೋ ತಿಮ್ಮಪ್ಪ ಬಾರೋ
ಕಂದರ್ಪನಯ್ಯನೆ ಕಂಚಿವರದ ಬಾರೋ || ೨ ||
ಅಣ್ಣ ಬಾರೋ ಎನ್ನ ಚಿನ್ನ ಬಾರೋ
ಪುಣ್ಯಮೂರ್ತಿ ಮಹಿಷಪುರಿ ಚೆನ್ನ ಬಾರೋ || ೩ ||
ವಿಷ್ಣು ಬಾರೋ ಉಡುಪಿ ಕೃಷ್ಣ ಬಾರೋ
ಏನ್ನಿಷ್ಟ ಮೂರ್ತಿ ಪುರಂದರವಿಠಲ ಬಾರೋ || ೪ ||
0 ಕಾಮೆಂಟ್‌ಗಳು