ಮಂಗಳ ಸ್ತುತಿ - ಮಂಗಳಂ ಗುರು ಶ್ರೀ ವೀರ ಗಣೇಶನಿಗೇ

|| ಮಂಗಳ ಸ್ತುತಿ ||

kannadabhajanlyrics.com
kannadabhajanlyrics.com


ಮಂಗಳಂ ಗುರು ಶ್ರೀ |

ವೀರ ಗಣೇಶನಿಗೇ |ವರ |

ಶಾಂಭವೀ ಸುತ ಲೋಕರಕ್ಷಕ |

ವಿಘ್ನ ವಿನಾಶಕಗೇ ॥ ೧ ||


ಮಂಗಳಂ ಗುರು ಶ್ರೀ | ಗಿರಿಜಾ ಕಾಂತನಿಗೇ|

ವಾರಣಾಸೀ ಕ್ಷೇತ್ರದಿ ಬೆಳಗುವ |

ವರ ವಿಶ್ವೇಶ್ವರಿಗೆ ॥ ೨ ||


ಮಂಗಳಂ ಗುರುಶ್ರೀ | ಲಕ್ಷ್ಮೀ ರಮಣರನಿಗೇ |

ಕಮಲಾದೇವಿಯ ಅಂಕದಿ ಧರಿಸಿದ |

ಲೋಲ ಮೂರುತಿಗೇ || ೩ ||


ಮಂಗಳಂ ಜಯಶ್ರೀ | ಸ್ವರ್ಣಾಂಬೆ ತಾಯಿಗೇ |

ವಿದ್ಯಾ ಜ್ಞಾನವ ನೀಡುತ ಲೋಕವ |

ಕಾಯುತಲಿರುವಳಿಗೇ ॥ ೪ ||


ಮಂಗಳಂ ಗುರು ಶ್ರೀ | ರಾಮಚಂದ್ರನಿಗೇ |

ಅಂಜನಿ ತನಯನ ಬಲಗಡೆಯಲ್ಲಿ |

ನೂತನ ಸೌಧದಿ ಮಂಡಿಪಗೇ  ॥ ೫ ||


ಮಂಗಳಂ ಗುರುಶ್ರೀ | ಆಂಜನೇಯನಿಗೇ |

ವರ | ಜಾನಕೀ ಪತಿ ರಾಘವೇಂದ್ರನ |

ಪಾದ ಸೇವಕಗೇ ॥ ೬ ||


ಯೋಗ ತತ್ಪರಗೇ | ಸತ್ಯ ಸಂಧನಿಗೇ |

ತಾರಕ ಮಂತ್ರವ ಜಪಿಸುತ ಲೋಕವನೆಲ್ಲಾ |

ಬೆಳಗುವಗೇ   ॥ ೭ ||


ಸ್ವರ್ಣವರ್ಣನಿಗೇ | ಸುಜ್ಜಾ ನ ಮೂರುತಿಗೇ |

ಶ್ರೀ ರಾಮ ಚರಿತೆಯ ತತ್ವವ ಬೋಧಿಪ 

ರಾಮ ಕಿಂಕರಗೆ   || ೮ ||


ಸತ್ಯಗೋಚರಗೇ | ವೀತರಾಗನಿಗೇ |

ಮಾನವರೆಲ್ಲರ ದುಃಖವ ಕ್ಷಣದಲಿ |

ನಾಶಗೈಯುವಗೇ ॥ ೯ ||


ಶೂರ ವೀರದನಿಗೇ | ಪ್ರೌಢ ವಿಕ್ರಮಗೇ 

ಪರ್ವತ ಭೇದಕ ವಜ್ರಾಯುಧದಿಂ |

ಜಂಬುಮಾಲಿಯ ನಾಶಕಗೇ  ॥ ೧0 ||


ಸರ್ವ ಸುಂದರಗೇ | ಕೇಸರಿತನಯನಿಗೇ | 

ತಕ್ಷತನ್ಯಾ ಭಯವನು ಕ್ಷಣದಲಿ |

ನಾಶಗೈದವಗೇ   || ೧೧ ||


ರುಕ್ಮ ವರ್ಣನಿಗೇ | ರಾಮದೊತನಿಗೇ |

ಉದಧಿಕ್ರಿಮಣವ ಲೀಲಾಮಾತ್ರದಿ |

ಚರಿಸಿದ ಮಾರುತಿಗೇ ॥ ೧೨ ||


ಉಗ್ರ ನೇತ್ರನಿಗೇ | ಅನಂತ ರೂಪರನಿಗೇ | 

ಶಾಕಿನಿ ಡಾಕಿನಿ ಭೂತವಿನಾಶಕ |

ಪಂಚಾಕ್ಷರಿಯಾ ಜಪಿಸುವಗೇ ॥ ೧೩ ||


ಸಾಮಗಾಯಕಿಗೇ | ವೇದ ಪಾರಗೆಗೇ | 

ಉಪನಿಷತ್ಸಾರದ ಬ್ರಹ್ಮಜ್ಞಾನವ ಲೋಕಕೆ |

ಸಾರುವೆಗೇ   || ೧೪ ||


ಪ್ರತಿವಾದಿ ಮುಖಸ್ತಂಭನಿಗೇ : ಪರ |

ಸೈನ್ಶ ವಿನಾಶಕಗೇ |

ಅಶೋಕ ವನದಲಿ ಸೀತಾದೇವಿಗೆ ।

ಉಂಗುರವಿತ್ತಾ ಧೀರನಿಗೇ॥ ೧೫ ||


ಬೃಹತ್ಕಾನಿಗೇ | ಬೃಹತ್ಪುಚ್ಛನಿಗೇ | 

ಲಂಕಾಪುರವನು ಪುಚ್ಛದಿಂದಲೆ |

ಲೀಲಾ ಮಾತ್ರದಿ | ಸುಟ್ಟವಗೇ   || ೧೬ ||


ಶೂರ ಪ್ರತಾಪನಿಗೇ | ಭೀಮರೂಪನಿಗೇ । ಶ್ರೀ 

ರಾಮ ಪಾದ ಸೇವಾಸಾರವ | 

ಸಾರಿ | ಭಜಿಪನಿಗೇ || ೧೭ ||


ಧರ್ಮಾಧ್ಯಕ್ಷನಿಗೆ | ಕರ್ಮ ಫಲ ಪ್ರದಗೇ

ಧರ್ಮಾಧರ್ಮದ ವಿವೇಚನೆ ನೀಡಿ |

ಲೋಕ ರಕ್ಷಿಪಗೆ   || ೧೮ ||


ಮಂಗಳಂ ಗುರು ಶ್ರೀ | ಆಂಜನೇಯನಿಗೆ | ವರ

ಜಾನಕಿ ಪತಿ ರಾಘವೇಂದ್ರನ |

ಪಾದ ಸೇವಕಗೆ || ೧೯ ||






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು