|| ಗುರು ಮಹಿಮಾ ಸ್ತುತಿ ||
kannadabhajanlyrics.com |
ಸಂಕಟ ಹರನ್ಯಾವ ನಮ್ಮ ।|
ಶಂಕರ ಗುರುದೇವ ||ಪಲ್ಲವಿ॥
ಬೆಂಕಿಯ ಕಿಡಿಗಳು ಭೋಂಕರಿಸುತಿರೆ।
ಭಯಂಕರರ ಯಮಕಿಂಕರ ರೆಸಗುವ ॥ಅ.ಪ.॥
ಮಾಂಸದ ತನುವೆಲ್ಲಿ | ಆ ಪರಹಂಸನ ಘನವೆಲ್ಲೀ।
ಸಂಶಯವಳಿವ ನಿಜಾಂಶವನರಿಯದೆ |
ವಂಶಕೆ ಬಳಲುತ ಸಂಸಾರದೊಳಿಹ ॥ ೧ ||
ಡಂಬವೆ ಹಿತವಾಗಿ | ಗುರುಚರಣಾಂಬುಜಗಳ ನೀಗಿ।
ರಂಭೆಯ ಸುಖದಾಡಂಬರ ಮುಗಿಯಲು |
ಹ೦ಬಲಿಸುತ ಮಲಕುಂಭದಿ ಜನಿಸುವ || ೨ ||
ಬಚ್ಚಲೊಳಗೆ ಮೂಡಿ ಆಪರ ಕಿಚ್ಚುಗಳೊಳು ಬಾಡಿ |
ನಿಶ್ಚಲ ಪರದೊಳಗೆಚ್ಚರವಿಲ್ಲದೆ |
ಹೆಚ್ಚಿದ ಮರಣಕೆ ಬೆಚ್ಚುತ ಬಳಲುವ || ಸಂಕಟ ||
ಭಂಗವೇಕೆ ಪಡುವೆ|ನೀ ನಿಸ್ಸಂಗಿಯಾಗು ಮನವೇ
ರಂಗುಗೂಡಿ | ಬಹಿರಂಗವಾಗಿ | ತನು ಸಂಗದಿಂದ |
ನಿಜ ಲಿಂಗವ ಕಾಣದೆ || ಭಂಗವೇಕೆ || ಪ ||
ಬಂಧು ಬಳಗವೆಂದು | ಸಡಗರದಿಂದ ಬಳಲಿ ನೊಂದು ||
ಮುಂದೆ ತಿಳಿಯದೆ | ಹಿಂದೆ ಉಳಿಯದೆ |
ಎಂದಿನಂತಲೇ ಹೊಂದುತ ತನುಗಳ || ಭಂಗವೇಕೆ ||೧.
ಆತ್ಮ ಭಾವವಳಿದು | ಇಲ್ಲದ ಜಾತಿಯಲ್ಲಿ ಉಳಿದು ||
ಛಾತಿ ಪೋಗಿ | ಯಮ ಭೀತಿಗಾಗಿ | ಬಹುನಾಥನಾಗಿ |
ಕಡು ಪಾತಕಿಯಾಗುತ || ಭಂಗವೇಕೆ || ೨.
ಶಂಕೆಯಲ್ಲಿ ಪಳಗೀ|ಪಾಪದ ಪಂಕದಲ್ಲಿ ಮುಳುಗೀ।
ಸಂಕಟ ಅಟವಿಗೆ ಬೆಂಕಿಯಾದ|ಗುರುಶಂಕರಾರ್ಯನಿಗೆ
ಕಿಂಕರನಾಗದೆ |।ಭಂಗ|| ೩.
0 ಕಾಮೆಂಟ್‌ಗಳು