ಶ್ರೀ ಶ್ರೀ ಬಿಂದುಮಾಧವ ಸದ್ಗುರುಗಳ ವಿರಚಿತ - ಕಪಿರಾಜ ನಿನ್ನಯ ಕರುಣೆಯ ತೋರೋ

|| ಹನುಮ ಸ್ತುತಿ ||

ರಚನೆ : ಶ್ರೀ ಶ್ರೀ ಬಿಂದುಮಾಧವ ಸದ್ಗುರುಗಳು 



kannadabhajnlyrics.com
kannadabhajnlyrics.com
ಕಪಿರಾಜ ನಿನ್ನಯ ಕರುಣೆಯ ತೋರೋ 

ಬಳಲಿ ಬಳಲಿ ನಾನು ಸೋತಿಹೆನಯ್ಯಾ।।

(ಬೆಂಡಾದೆನಯ್ಯಾ) 

ದೇಶದೇಶವ ಸುತ್ತಿ ಕೋಶವೋದಿ ನಿನ್ನಾ 

ಕಾಣದೆ ಹಂಬಲಿಸಿ ಬಂದು ನಿಂದಿಹೆನಯ್ಯಾ ।।೧|। 


ಮಾಯಾಮಡುವಿನೊಳಗೆ ಮುಳುಗಿ ಸೋತಿಹೆನಯ್ಯಾ

ಬಂಧುಬಳಗವು ನೀನೇ ಎಂದು ನಂಬಿದೆನಯ್ಯ।। ೨ ।। 


ತಾರಕಬ್ರಹ್ಮನೇ ತಡವಿನ್ಹ್ಯಾತಕೋ

ಒಲಿದು ಪಾಲಿಸಿ ಎನ್ನ ಸಲಹಲು ಬಾರೋ ॥ ೩ ॥ 


ದೇಶ ದೇಶವ ಸುತ್ತಿ ಹಲವು ಜನರನಂಬಿ

ಮೋಸಹೋದೆ ಸ್ವಾಮಿ ಬಡವಾದೆ ಹರಿಯೇ ॥೪ ॥ 


ಬರೀ ಭ್ರಮೆಯಿಂದಲಿ ಜಗವನಂಬಿದೆ ನಾನು

 ಜಗದೊಡಯ ಶ್ರೀ ರಘುರಾಮ ದಾಸನೇ ।।೫ ||


 ವಿಶ್ವವಂದ್ಯನು ನೀನು ಕಾರುಣಿಕನು ನೀನು

ಹಣೆಯ ಬರಹ ತಿದ್ದಿ ಸಲಹುವೆ ನೀನು

ದೇವಾದಿದೇವ ಶ್ರೀ ವೀರಪ್ರತಾಪನೆ ॥ ೬॥ 


ಆದಿಮೂರುತಿ ನೀನು ವೇದಮೂರುತಿ ನೀನು

ಬೋಧಿಸಿ ಜ್ಞಾನವ ಬುದ್ದಿಯೂಳ್‌ ಇರಿಸೊ

ವಿಶ್ವವಂದ್ಯನೆ ಶ್ರೀ ವೀರಪ್ರತಾಪನೆ ॥೭॥ 


ಬೆಲಗೂರ ಹನುಮನ ಬಲ್ಲವರೇ ಬಲ್ಲರು 

ಬಲ್ಲಿದ ಜನರಿಗೆ ಕರುಣೆ ತೋರುವ ಸ್ವಾಮಿ ॥೮ ॥ 


ಬಿಂದುಮಾಧವ ಮನದಿ ನೆಲೆನಿಂತ ಸ್ವಾಮಿ ನೀ

ಹೃದಯಾಂತರಂಗದ ವಿಜಯಮಾರುತಿ ನೀನೇ ।। ೯॥ 

ಕಪಿರಾಜ ನಿನ್ನಯ ಕರುಣೆಯ ತೋರೋ ।। 


ತಮ್ಮ ಆರಾಧ್ಯ ದೇವ ವೀರಪ್ರತಾಪನಲ್ಲಿ ಸದ್ಗುರು

ಬಿಂದುಮಾಧವರ ಮನದಾಳದ ಪ್ರಾರ್ಥನೆ 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು