ಶ್ರೀ ಶ್ರೀ ಶ್ರೀ ಚಂದ್ರಶೇಖರ ಭಾರತಿ ಗುರುಗಳ ಸ್ತುತಿ - ನಾನು ನನ್ನದು ಎಂಬ ವ್ಯಾಮೋಹಕ್ಕೆ ಸಿಲುಕಿ ದೀನರಾದೆವು ಎಮ್ಮ ಕಾಯೋ ದಯಾನಿಧೇ

ಶ್ರೀ ಶ್ರೀ ಶ್ರೀ ಚಂದ್ರಶೇಖರ ಭಾರತಿ 

      ಗುರುಗಳ ಸ್ತುತಿ

kannadabhajanlyrics.com
 kannadabhajanlyrics.com 


ನಾನು ನನ್ನದು ಎಂಬ ವ್ಯಾಮೋಹಕ್ಕೆ ಸಿಲುಕಿ

ದೀನರಾದೆವು ಎಮ್ಮ ಕಾಯೋ ದಯಾನಿಧೇ ....

ಜ್ಞಾನವ ನೀಡೆಮಗೆ ಗುರುವೇ 

ಆನತ ಜನ ಪರಿಪಾಲನ ಪ್ರಭುವೇ ॥ ಪ ||


ಸುಂದರಮುಖಿ ಶ್ರೀ ಶಾರದಾಂಬೆಯಾ

ನಂದದಿ ಪೂಜಿಪ ನಿರ್ಮಲ ನೇತ್ರನೆ

ಚಂದ್ರಮೌಳೀ ಪ್ರಿಯ ಪ್ರಣವಸ್ವರೂಪನೆ

ಚಂದ್ರಶೇಖರ ಭಾರತೀ ಗುರುವೇ        ॥ ೧ ||


ಪರಮಧರ್ಮ ಸಾಮ್ರಾಜ್ಯಪಾಲನೆ

ಪರಮಹಂಸ ನರಸಿಂಹ ಸ೦ಜಾತನೆ

ವರಶ್ಶಂಗಗಿರಿ ಪುರ ನಿವಾಸನೆ

ನಿರುಪಮ ಗುಣಶೀಲ ಸತ್ಯ ಸ್ವರೂಪ   || ೨ ||


ಶಂಕರ ಸ್ಲಾಪಿತ ಶಾರದಾಸುತ

ಚಂದ್ರಶೇಖರ ಭಾರತಿ ಸ್ವಾಮಿಯೆ

ಕರುಣಿಸು ಅವಧೂತ ಪರಮಹಂಸ

ಶ್ರೀ ಚಂದ್ರಶೇಖರ ಭಾರತಿ ಗುರುವೆ     || ೩ ||






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು