ಎಂಥಾ ಚೆಲುವಗೆ ಮಗಳನು ಕೊಟ್ಟನು - Entha cheluvage magalanu kottanu

 ಶಿವಸ್ತುತಿ

kannadabhajanlyrics.com
kannadabhajanlyrics.com


ಎಂಥಾ ಚೆಲುವಗೆ ಮಗಳನು ಕೊಟ್ಟನು

ಗಿರಿರಾಜನು ನೋಡಮ್ಮ

ಕಂತು ಹರ ಶಿವ ಚೆಲುವ ಎನ್ನುತ

ಮೆಚ್ಚಿದನೇ ನೋಡಮ್ಮಮ್ಮಾ || ಪ ||


 ಮೋರೆ ಐದು ಮೂರು ಕಣ್ಣು ವಿಪರೀತ ನೋಡಮ್ಮ

 ಕೊರಳೊಳು ರುಂಡ ಮಾಲೆಯ ಧರಿಸಿದ

ಉರಗಭೂಷಣನ ನೋಡಮ್ಮ || ೧ ||


 ತಲೆಯಂಬೋದು ನೋಡಿದರೆ ಜಟೆ 

ಹೊಳೆಯುತ್ತಿದೆ ನೋಡಮ್ಮಮ್ಮಾ 

ಹಲವು ಕಾಲದ ತಪಿಸಿ ರುದ್ರನ

ಬೂದಿಯ ನೋಡಮ್ಮಮ್ಮಾ || ೨ ||


 ಭೂತ ಪ್ರೇತ ಪಿಶಾಚಿಗಳೆಲ್ಲ

ಪರಿವಾರವು ನೋಡಮ್ಮಮ್ಮ

ಈತನ ನಾಮವು ಒಂದೇ ಮಂಗಳ

ಮುಪ್ಪರಹರ ನಿವ ನೋಡಮ್ಮಮ್ಮ || ೩ ||


ಮನೆಯೆಂಬುದು ಸ್ಮಶಾನವು ನೋಡೆ

ಗಜ ಚರ್ಮಾಂಬರ ನೋಡಮ್ಮ

 ಹಣವೊಂದಾದರು ಕೈಯೊಳಗಿಲ್ಲ

ಕಪ್ಪರವನು ನೋಡಮ್ಮಮ್ಮ || ೪ ||


ನಂದಿವಾಹನ ನೀಲಕಂಠನ

ನಿರ್ಗುಣನಿವ ನೋಡಮ್ಮಮ್ಮ 

ಇಂದಿರೆ ರಮಣನ ಶ್ರೀಪುರಂದರವಿಠಲನ

ಪೊಂದಿದವನ ನೋಡಮ್ಮ || ೫ ||



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು