ಗಣಪತಿ ಮಂಗಳ - ಓಂಕಾರೇಶ್ವರ ವಿನಾಯಕ | ಜಯ ಗಣನಾಥ ಗಜವದನ |

|| ಗಣಪತಿ ಮಂಗಳ ||

kannadabhajanlyrics.com
kannadabhajanlyrics.com


ರಾಗ : ಕಲ್ಯಾಣಿ

ತಾಳ : ಏಕ ತಾಳ 


ಓಂಕಾರೇಶ್ವರ ವಿನಾಯಕ |

ಜಯ ಗಣನಾಥ ಗಜವದನ |

ಸುರ ಮುನಿ ಸೇವಿತ ಶುಭಕರಣ | 

ಮಂಗಳ ದಾತಾ ಭವ ಹರಣ |

ಸುರ ಮುನಿ ಸೇವಿತ ಶುಭ ಕರಣ ||

ಸಿದ್ಧಿ ವಿನಾಯಕ ಭವ ಹರಣ ॥       ೧.


ಆಕಾರ ಚರಣ ವಿಶ್ವಂಭರಣ |

ಉಕಾರ ಲಂಬೋದರ ಧೀಕರಣ |

ಮಕಾರ ಮಸ್ತಕ ಶಿವ ಶಿವ ಸ್ಮರಣ |

ಜಯ ಜಯ ಪ್ರಣವೇಶಾ ಈಶಾ ||    ೨.   


 ಪಾಶಾಂಕುಶಧರ ಪಾಪವಿಮೋಚನ |

ರಕ್ಷಿಸು ಎಮ್ಮನು ಗಜಾನನ |

ಲಂಬೋದರನೇ ನಂಬಿದೆ ನಿನ್ನನು |

ಬೆಂಬಿಡ ಬೇಡವೋ ಗಜಾನನ ॥       ೩.


ಮಾತಂಗ ವದನ ಆನಂದ ಸದನ |

ಮಹಾಗಣಪತೇ ಹೇ ಶಿವನಂದನ |

ವಿಘ್ನವಿನಾಶಕ ಬುದ್ಧಿ ಪ್ರದಾಯಕ |

ಸಿದ್ಧ ಹಸ್ತಸುರಮುನಿಜನ ಸೇವಿತ ||     ೪.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು