॥ ಗುರು ಸ್ತುತಿ ॥
ರಾಗ : ತೋಡಿ
ತಾಳ : ಆದಿ
॥ ಹಾಕಿದ ಜನಿವಾರವಾ । ಸದ್ಗುರುನಾಥ ।
ನೂಕಿದ ಭವ ದೂರವಾ ॥
ಹಾಕಿದ ಜನಿವಾರ । ನೂಕಿದ ಭವದೂರ ॥
ಬೇಕೆನುತಲಿ ಬ್ರಹ್ಮ । ಜ್ನಾನ ಉಚ್ಛರಿಸೆಂದು ॥
ಹಾಕಿದ ಜನಿವಾರವಾ ॥ ಪ.
॥ ಸಂಧ್ಯಾವಂದನೆ ಕಲಿಸಿ ! ಆನ೦ದದಿ ।
ಬಿ೦ದುವರ್ಗದ ನಿಲಿಸಿ ॥
ಹೊಂದಿಸಿ ಯಮುನ ತೀರದ ಮಧ್ಯದಿ ನಿಂದು
ಎಂದೆಂದಿಗೂ । ಯಮ । ದುಂದುಗ್ವನ ನಳೆಯೆಂದು ॥
॥ ಹಾಕಿದ ಜನಿವಾರವಾ ॥ ೧.
॥ ಶಿಶುನಾಳಧೀಶನಲ್ಲಿ ಹುಣ್ಣಿಮೆ ನೂಲು |
ಹೊಸತಾಗಿ ಹೊಸೆಯುತಲಿ ॥
ಮುಸುಕಿರ್ದ ವ್ಯಸನದ । ಕಸರನು ಕಳಿ ಎಂದು ।
ಹಸನಾಗಿ ಮೂಲ । ಮಂತ್ರದ ಮನಿಯೊಳು ॥
ಹಾಕಿದ ಜನಿವಾರವಾ ॥ ೨.
0 ಕಾಮೆಂಟ್‌ಗಳು