ಮಂಗಳವಾಗಿದೆ ಜಯಜಯ ಮಂಗಳವಾಗಿದೆ - Mangalavagide Jaya Jaya

|| ಮಂಗಳ ||

kannadabhajanlyrics.com
kannadabhajanlyrics.com


ರಾಗ : ಮಧ್ಯಮಾವತಿ

ತಾಳ : ಆದಿ 


॥ ಮಂಗಳವಾಗಿದೆ ।! ಜಯಜಯ ಮಂಗಳವಾಗಿದೆ ॥

॥ ಕಂಗಳ ಕೊನೆಯಲಿ । ಥಳ ಥಳ ಹೊಳೆಯುವ । 

ತಿಂಗಳ ಬೆಳಕಿನ ತಿಳಿರಸ ಉಕ್ಕುತ

                                             ॥ ಮಂಗಳವಾಗಿದೆ ॥ 


॥ ಆರು ಚಕ್ರವ ಮೀರಿ ಸೂಕ್ಷ್ಮದ್ವಾರದೊಳಗೆ ಸೇರಿ ।

ಏರಿಸಾಸಿರದಳ ಪದ್ಮಸಿಂಹಾಸನ

ಭೂರಿ ಬ್ರಹ್ಮಾನಂದ | ಪದವಿಯ ಸೇರಲು

                                          ॥ ಮಂಗಳವಾಗಿದೆ ॥ 


॥ವಿರತಿಯೆಂಬುವ ಬತ್ತಿ।ಬತ್ತಿಗೆ ಎರಕವಾಗಿಹ ತೈಲ||

ಎರಡು ಒಂದಾಗಿರಲರುವೆಂಬ ಜ್ಯೋತಿಯು|

ಉರಿಯುವ ತಾಮಸ ಕತ್ತಲೆಯಳಿದು

                                          ॥ ಮಂಗಳವಾಗಿದೆ ॥ 


॥ರವಿ ಶಶಿ ತಾರೆಗಳಾ ಬೆಳಗುವ|ಪ್ರವಿಮಲ ಚಿತ್ಕಳೆಯು

ಕವಿದೊಳಗೊರಗೆಂದೆಬುದ ತೋರುವ ।

ಅವಿರಳ ಗುರುಮಹಲಿಂಗನ ತೇಜವೆ

                                             ॥ ಮಂಗಳವಾಗಿದೆ ॥ 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು