।| ಹರಿನಾಮ ॥
ರಾಗ: ಮಧ್ಯಮಾವತಿ
ತಾಳ: ಆದಿ
ಏಸುಕಾಯಂಗಳ ಕಳೆದು|ಎಂಭತ್ನಾಲ್ಕು ಜೀವ|
ರಾಶಿಯನ್ನು ದಾಟಿಬಂದ । ಈ ಶರೀರ ॥
ತಾನಲ್ಲಾ ತನ್ನದಲ್ಲ । ಆಸೆ ಥರವಲ್ಲ | ಆಸೆ ಥರವಲ್ಲ |
ಮುಂದೆ ಬಹುದಲ್ಲಾ ॥ ದಾಸನಾಗು ವಿಶೇಷನಾಗು ॥
ದಾಸನಾಗು ವಿಶೇಷನಾಗು|| ಪ ||
||ಆಶಕ್ಷೇಶ ದೋಶವೆಂಬ । ಅಬ್ಬಿಯೊಳು ಮುಳುಗಿ ।
ಯಮನ ಪಾಶಕ್ಕೊಳಗಾಗದೆ | ನಿರ್ದೋಷಿಯಾಗು ॥
ಸಂತೋಷಿಯಾಗು । ದೋಷರಾಶಿ ಕೃಷ್ಣವೇಣಿ ।
ಗಂಗೆ ಗೋದಾವರಿ । ಭವ । ನಾಶಿ ತುಂಗ ಭದ್ರ ಯಮುನ ।
ಪಾಶದಲ್ಲಿ । ಉಪವಾಸದಲ್ಲಿ ।
ಕಾಶಿ ವಾರಣಾಸಿ । ಕಂಚಿ । ಕಾಳಹಸ್ತಿ ರಾಮೇಶ್ವರಾ ॥
ಏಸುದೇಶ ತಿರುಗಿದರೂ|ಫಲವೇನು|ಮುಂದೇಹೋದೇನು ।
ಮೀಸಲಾಗಿ ಮಿಂದು ಜಪತಪ ಹೋಮ ನೇಮಗಳ ॥
ಏಸು ಬಾರಿ ಮಾಡಿದರೂ ಫಲವೇನು । ಈ ಛಲವೇನು ॥
ದಾಸನಾಗು ॥
||ಅಂದಿಗೂ ಇಂದಿಗೂ ಒಮ್ಮೆ । ಸಿರಿಕಮಲೇಶನನ್ನ |
ಒಂದು ಬಾರಿ ಯಾರೂ ಹಿಂದೆ ನೆನೆಯಲಿಲ್ಲ|
ಮನ ದಣಿಯಲಿಲ್ಲ||
ಬಂದು ಬಂದು ಭ್ರಮೆಗೊಂಡು|ಮಾಯಾ ಲೋಕಕೆ|ಸಿಕ್ಕಿ
ಇಂದು ಬಂದು|ಬಂಧದಿಂದ|ಉಳಿಯಲಿಲ್ಲ|
ಬಂಧ ಕಳೆಯಲಿಲ್ಲ!
ಇಂದು ಕಂಡ್ಯಾ ದೇಹದಲ್ಲಿ । ಬ್ರಹ್ಮಾಂಡ । ಹಾಗೆ ಪಿಂಡಾಂಡ ॥
ಇಂದು ಹರಿಯ ಧ್ಯಾನವನ್ನು ಮಾಡಿ ವಿವೇಕದಿ ॥
ಮುಕುಂದನಿಂದ ಮುಕ್ತಿಯನ್ನು ಬೇಡು ಕಂಡ್ಯಾ ॥ ನೀ
ನೋಡಕಂಡ್ಯಾ ॥ ದಾಸನಾಗು ||
॥ ನೂರು ಬಾರಿ ಶರಣು ಮಾಡಿ । ನೀರಮುಳುಗಲ್ಯಾಕೆ
ಪರನಾರಿಯರ ನೋಟಕ್ಕೆ ಗುರಿಯ ಮಾಡಿದಿ ।
ಮನಸೆಳೆಯ ಮಾಡಿದಿ ।
ಸೋರೆಯೊಳು । ಸೂರೆ ತುಂಬಿ । ಮೇಲೆ ಹೂವಿನ ಹಾರ
ಗೀರುಗಂಧಿ ಅಕ್ಷತೆಯ । ಧರಿಸಿದಂತೆ । ನೀ ಮೆರೆಸಿದಂತೆ ॥
ನಾರಾಯಣ ಅಚ್ಯುತ । ಅನಂತಾದಿ ಕೇಶವನಾ॥ಔ
ಸಾರಾಮೃತವನುಂಡು ಸುಖಸೋ ಲಂಡಜೀವವೇ
ಎಲೋ ಭಂಡ ಜೀವವೇ || ದಾಸನಾಗು ॥
0 ಕಾಮೆಂಟ್‌ಗಳು