ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀರಾ - Kusina Kandira Mukhyaprana Kandira

|| ಹನುಮ ಸ್ತುತಿ ||



ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀರಾ 

ಬಾಲನ ಕಂಡೀರಾ ಬಲವಂತನ ಕಂಡೀರಾ। 


ಅಂಜನೆಯುದರದಿ ಜನಿಸಿತು ಕೂಸು

ರಾಮನ ಪಾದಕ್ಕೆರಗಿತು ಕೂಸು 

ಸೀತೆಗೆ ಉಂಗುರ ಕೊಟ್ಟಿತು ಕೂಸು

ಲಂಕಾ ಪುರವನೇ ಸುಟ್ಟಿತು ಕೂಸು  ||1॥ 


ಬಂಡಿ ಅನ್ನವನುಂಡಿತು ಕೂಸು

ಬಕನ ಪ್ರಾಣವ ಕೊಂದಿತು ಕೂಸು

ವಿಷದ ಲಡ್ಡುಗೆ ಮೆದ್ದಿತು ಕೂಸು

ಮಡದಿಗೆ ಪುಷ್ಪವ ಕೊಟ್ಟಿತು ಕೂಸು  ॥2॥ 


ಮಾಯಾವೆಲ್ಲ ಗೆದ್ದಿತು ಕೂಸು 

ಮಧ್ವ ಮತವನುದರಿಸಿತು ಕೂಸು

ಪುರಂದರ ವಿಠಲನ ದಯದಿಂದ ಕೂಸು

ಸುಮ್ಮನೆ ಉಡುಪಿಲಿ ನಿಂತಿತು ಕೂಸು॥3॥ 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು