ಇಲ್ಲಿ ಬರ್ತೀರೋ ಇಲ್ಲಿಲ್ಲಾ ಅನ್ತಿರೋ - Illi Bhartiro Illilla Anthiro

|| ತತ್ವ ಪದ ||

kannadabhajanlyrics.com
kannadabhajanlyrics.comಇಲ್ಲಿ ಬರ್ತೀರೋ ಇಲ್ಲಿಲ್ಲಾ ಅನ್ತಿರೋ - Illi Bhartiro Illilla Anthiro bhajan lyrics in kannada


 ಇಲ್ಲಿ ಬರ್ತೀರೋ ಇಲ್ಲಿಲ್ಲಾ ಅನ್ತಿರೋ ||ಪ ||

ಅಲ್ಲಿ ಹೋಗ್ತೀರೋ ಅಲ್ಲಿಲ್ಲಾ ಅನ್ತಿರೋ ||ಅ. ಪ.||


ಇಲ್ಲಿ ಅಲ್ಲಿ ಎಲ್ಲೂ ಇಲ್ಲಾ ಅನ್ನೋರ ಕಾಣಿರೋ

ನಿನ್ನ ಒಳಗೇ ನಿನ್ನನು ತೋರ್ವನ್‌ ಕಾಣಿರೋ  ೧.


ಓಡಿ ಬನ್ನಿರೋ ಓಡೋಡಿ ಬನ್ನಿರೋ

ತಾಳ ತಮಟೆ ಬಡಿದು ನಾವು ಕುಣಿಯೋಣ ಬನ್ನಿರೋ ೨.


ನಾಮವ ಜಪಿಸುತ ನಮ್ಮ ತನವ ಅರಿಯೋಣ ಬನ್ನಿರೋ 

ಭಜನೆ ಮಾಡುತ ನಮ್ಮ ತನುವ ಮರೆಯೋಣ ಬನ್ನಿರೋ ೩.


ಪಾಪ ಪುಣ್ಯ ಅರಿವಿನ ಜ್ಞಾನ ಪಡೆದು ಕೊಳ್ಳಿರೋ

ಜಗದ ಆಟಕೆ ಸೂತ್ರಧಾರನ ಕಾಣಲು ಬನ್ನಿರೋ ೪.


ಸೃಷ್ಟಿ ಸ್ಥಿತಿ ಲಯಕೆ ಕಾರಣ ಇವನೆ ಕಾಣೀರೋ

ಹುಟ್ಟು ಸಾವು ಕೊಂಡಿ ಕಳಚೋ ಕೀಲೀ ಕೇಳಿರೋ ೫.


ಆಶಾಪಾಶದ ನಾಶದ ಭಾಷೆಯ ಕೇಳಿ ಕಲಿಯಿರೋ ಅರಿವಿನಾಜೆಗೆ ಕುಳಿತ ಇವನ ಅಳೆಯಬೇಡಿರೋ ೬.


ವೇದಕೆ ನಿಲುಕದ ಭಾರೀ ಗಾತ್ರದ ಗೂಡು ಕಾಣಿರೋ

ಭೇದವಿಲ್ಲದ ಭಕ್ತಿಯದೊಂದೇ ಸೂತ್ರದಿ ಪಡೆಯಿರೋ ೭.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು