|| ಹನುಮ ಸ್ತುತಿ ||
ಹನುಮ ನಮ್ಮ ತಾಯಿ ತಂದೆ
ಭೀಮ ನಮ್ಮ ಬಂಧು ಬಳಗ
ಆನಂದ ತೀರ್ಥರೆ ನಮ್ಮ ಗತಿಗೋತ್ರವಯ್ಯ | ಪ |
ತಾಯಿತಂದೆ ಹಸುಳೆಗಾಗಿ ಸಹಾಯಮಾಡಿ ಸಾಕುವಂತೆ
ಆಯಾಸವಿಲ್ಲದೆ ಸಂಜೀವನವ ತಂದೆ
ಗಾಯಗೊಂಡ ಕಪಿಗಳನು ಸಾಯದಂತೆ ಪೊರೆದ
ರಘುರಾಯನಂಘ್ರಿಗಳೆ ಸಾಕ್ಷಿ ತ್ರೇತಾಯುಗದಿ ||೧||
ಬಂಧುಬಳಗದಂತೆ ಆಪದ್ಬಾಂಧವನಾಗಿ ಪಾರ್ಥನಿಗೆ
ಬಂದ ಬಂದ ದುರಿತಗಳ ಪರಿಹರಿಸಿ
ಅಂಧಕಜಾತರ ಕೊಂದು ನಂದಕಂದಾರ್ಪಣೆಂದ ಗೋ
ವಿಂದನಂಘ್ರಿಗಳೇ ಸಾಕ್ಷಿ ದ್ವಾಪರಯುಗದಿ || ೨ ||
ಗತಿಗೋತ್ರರಂತೆ ಸಾಧುತತಿಗಳಿಗೆ ಮತಿಯ ತೋರಿ
ಮತಿಗೆಟ್ಟ ಇಪ್ಪತ್ತು ಒಂದು ಮತವ ಖಂಡಿಸಿ
ಗತಿಗೆಟ್ಟ ಸದ್ವೈಷ್ಣವರಿಗೆ ಸದ್ಗತಿಯ ತೋರಿದೆ ಪರಮಾತ್ಮ
ಗತಿ ಪುರಂದರವಿರಲನೆ ಸಾಕ್ಷಿ ಕಲಿಯುಗದಲ್ಲಿ ||೩||
0 ಕಾಮೆಂಟ್‌ಗಳು