|| ವೆಂಕಟರಮಣನೆ ಬಾರೋ ||
ರಚನೆ : ಪುರಂದರ ದಾಸರು
ವೆಂಕಟರಮಣನೆ ಬಾರೋ
ಶೇಷಾಚಲವಾಸನೆ ಬಾರೋ
ಪಂಕಜನಾಭ ಪರಮ ಪವಿತ್ರ
ಶಂಕರ ಮಿತ್ರನೆ ಬಾರೋ॥
ಮುದ್ದು ಮುಖದ ಮಗುವೇ ನಿನಗೆ
ಮುತ್ತು ಕೊಡುವೆನು ಬಾರೋ
ನಿರ್ದಯವೇಕೋ ನಿನ್ನೊಳಗೆ ನಾನು
ಹೊಂದಿದ್ದೇನು ಬಾರೋ ॥ 1| |
ಮಂದರಗಿರಿಯಾನೆತ್ತಿದಾನಂದ
ಮೂರುತಿಯೇ ಬಾರೋ
ನಂದನಕಂದ ಗೋವಿಂದ ಮುಕುಂದ
ಇಂದಿರೆಯರಸನೆ ಬಾರೋ ॥ ೨ ||
ಕಾಮನಯ್ಯ ಕರುಣಾಳೊ
ಶ್ಯಾಮಲ ವರ್ಣನೆ ಬಾರೋ
ಕೋಮಲಾಂಗ ಶ್ರೀ ಪುರಂದರ ವಿಠಲನೆ
ಸ್ವಾಮಿರಾಯನೆ ಬಾರೋ ||3॥
0 ಕಾಮೆಂಟ್‌ಗಳು