ಜಯ ಜನಾರ್ದನ ಕೃಷ್ಣ ರಾಧಿಕಾಪತೇ - Jaya Janardhana Krishna Radhika Pathe

 || ಕೃಷ್ಣ ಭಜನೆ ||



ಜಯ ಜನಾರ್ದನ ಕೃಷ್ಣ ರಾಧಿಕಾಪತೇ 

ಜನ ವಿಮೋಚನ ಕೃಷ್ಣ ಜನ್ಮ ಮೋಚನ

ಗರುಡ ವಾಹನ ಕೃಷ್ಣ ಗೋಪಿಕಾ ಪತೇ

ನಯನ ಮೋಹನ ಕೃಷ್ಣ ನೀರದೀಕ್ಷಣ ||


ಸುಜನ ಬಾಂಧವ ಕೃಷ್ಣ ಸುಂದರಾಕೃತೇ

ಮದನ ಕೋಮಲ ಕೃಷ್ಣ ಮಾಧವಾ ಹರೇ।

ವಸುಮತಿ ಪತೇ ಕೃಷ್ಣ ವಾಸವಾನುಜ 

ವರ ಗುಣಾಕರ ಕೃಷ್ಣ ವೈಷ್ಣವಾಕೃತೆ ||


ಸುರಚಿರಾನನ ಕೃಷ್ಣ ಶೌರ್ಯ ವಾರಿಧೇ

ಮುರಹರ ವಿಭೋ ಕೃಷ್ಣ ಮುಕ್ತಿದಾಯಕ।

ವಿಮಲಪಾಲಕ ಕೃಷ್ಣ ವಲ್ಲಭಿಪತೆ

ಕಮಲಲೋಚನ ಕೃಷ್ಣ ಕಾಮ್ಯದಾಯಕ ||


ವಿಮಲ ಗಾತ್ರನೇ ಕೃಷ್ಣ ಭಕ್ತ ವತ್ಸಲ 

ಚರಣ ಪಲ್ಲವಂ ಕೃಷ್ಣ ಕರುಣ ಕೋಮಲಂ ||

ಭವಲ ವೀಕ್ಷಣ ಕೃಷ್ಣ ಕೋಮಲಾಕೃತೆ 

ತವ ಪದಾಂಬುಜಂ ಕೃಷ್ಣ ಶರಣಮಾಶ್ರಯೇ ||


ಭುವನ ನಾಯಕಾ ಕೃಷ್ಣ ಪಾವನಾಕೃತೇ

ಗುಣಗಣೋಜ್ವಲ ಕೃಷ್ಣ ನಳಿನ ಲೋಚನ।

ಪ್ರಣಯ ವಾರಿಧೇ ಕೃಷ್ಣ ಗುಣಗಣಾಕರ

ದಾಮ ಸೋದರ ಕೃಷ್ಣ ದೀನ ವತ್ಸಲ ||


ಕಾಮ ಸುಂದರ ಕೃಷ್ಣ ಪಾಹಿ ಸರ್ವದಾ 

ನರಕ ನಾಶನಾ ಕೃಷ್ಣ ನರ ಸಹಾಯಕ। 

ದೇವಕೀ ಸುತ ಕೃಷ್ಣ ಕಾರುಣ್ಯಾಂಬುಧೇ 

ಕಂಸ ನಾಶನ ಕೃಷ್ಣ ದ್ವಾರಕಾ ಸ್ಥಿತ ||


ಪಾವನಾತ್ಮಕ ಕೃಷ್ಣ ದೇಹಿ ಮಂಗಲಂ 

ತತ್‌ ಪದಾಂಬುಜಂ ಕೃಷ್ಣ ಶ್ಯಾಮ ಕೋಮಲಂ ।

ಭಕ್ತವತ್ಸಲ ಕೃಷ್ಣ ಕಾಮ್ಯದಾಯಕ

ಪಾಲಿಸೆನ್ನನು ಕೃಷ್ಣ ಶ್ರೀ ಹರಿ ನಮೋ ||


ಭಕ್ತ ದಾಸನ ಕೃಷ್ಣ ಹರಸು ನೀ ಸದಾ

ಕಾದು ನಿಂತೆನಾ ಕೃಷ್ಣ ಸಲಹೆಯಾ ವಿಭೋ

ಗರುಡ ವಾಹನ ಕೃಷ್ಣ ಗೋಪಿಕಾ ಪತೇ

ನಯನ ಮೋಹನ ಕೃಷ್ಣ ನೀರದೀಕ್ಷಣ ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು