ಇಲ್ಲೇ ಸುಕ್ಷೇತ್ರ ಕಾಣಿರೋ ಬಲ್ಲವರಿಗೆ - Ille Sukshetra Kaniro Ballavarige

|| ಗುರು ಸ್ತುತಿ ||


kannadabhajanlyrics.com
kannadabhajanlyrics.com

ರಾಗ : ಷಣ್ಮುಖಪ್ರಿಯ

ತಾಳ : ಆದಿ 


ಇಲ್ಲೇ ಸುಕ್ಷೇತ್ರ ಕಾಣಿರೋ । ಬಲ್ಲವರಿಗೆ ।

ಇಲ್ಲೇ ಸುಕ್ಷೇತ್ರ ಕಾಣಿರೋ |

ಇಲ್ಲೇ ಸುಕ್ಷೇತ್ರವು|ಬಲ್ಲಂಥ ಮಹಿಮರಿಗೆ ।

ಇಲ್ಲಿಲ್ಲದಿಹುದು । ಮತ್ತಲ್ಲಿಯೂ ಇಲ್ಲದರಿಂದ ॥

||ಇಲ್ಲೇ ಸುಕ್ಷೇತ್ರ ॥ 


॥ ತನುವೆ ಕಾಶೀಕ್ಷೇತ್ರ। ಮನವೆ ಗಂಗಾತೀರ್ಥ ||

ತನುಮನವ ಬೆಳಗಿಸುವ । ಆತ್ಮನೆ ಶಿವನು ॥

ಅನವರತ ಅವನನ್ನೇ । ನೆನೆಯುವ ಮನತಾನೆ ॥

ಘನದುರಿತವ ಕಳೆದು । ಕೈವಲ್ಯವಿರುವುದರಿಂದ ॥

ಇಲ್ಲೇ ಸುಕ್ಷೇತ್ರ ||೧ || 

ಮೂಢನಂಬಿಕೆಯಿಂದ । ದೇಶದೇಶವ ತಿರುಗಿ ॥

ಅಲ್ಲಿಯೂ ನೋಡಿದರು । ಗುಡಿಗೋಪುರವು

ಮಡಿಯಿಂದ ಜಡವದನು । ಅಡಿಗಡಿಗೆ ಪೂಜಿಸಲು ॥

ಕೊಡಲು ಬಲ್ಲುದೆ ನಿನಗೆ । ದೃಢ ಪರಗತಿಯಾ ॥

ಇಲ್ಲೇ ಸುಕ್ಷೇತ್ರ ॥ ೨ ||


॥ ಜನಿಸದು ವೈರಾಗ್ಯ । ಮನಶುಚಿಯಾಗದೇ ॥

ತನು ಇಂದ್ರಿಯಗಳು । ನಿಲ್ಲಲಾರವು ॥

ಶುನಕನಂದದಿ ಸುತ್ತಿ । ಫಲವಿಲ್ಲದದರಿಂದ ||

ನೆನೆ ಗನ ಗುರು । ಬಿಂದು ಮಾಧವರ ನುತಿಸಲು ॥

ಇಲ್ಲೇ ಸುಕ್ಷೇತ್ರ || ೩ ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು