|| ಶ್ರೀ ಕೃಷ್ಣ ಸ್ತುತಿ ||
ರಚನೆ : ಶ್ರೀ ಪ್ರಸನ್ನ ವಿದ್ಯಾತೀರ್ಥರು
ರಾಗ : ಮೋಹನ
ತಾಳ : ಆದಿ
ಮಧುರವು ಮಧುರನಾಥನ ನಾಮವು
ದಧಿ ಮಧು ದ್ರಾಕ್ಷಾಸುಧೆರಸಗಳಿಗಿಂತ॥
ಸುಂದರವದನನ ಅರವಿಂದ ನಯನನ
ನಂದಕುಮಾರನ ಚೆಂದದ ನಾಮವು ||೧||
ಯದುಕುಲಶಿಲಕನ ಸದಮಲ ಚರಿತನ
ಮದನಪಿತನ ನಾಮ ಮುದದಲಿ ಪಾಡಲು॥ ೨||
ಗಾನವಿಲೋಲನ ದಾನವಕಾಲನ
ಲೀಲೆಗಳನು ಸದಾ ಲಾಲಿಸಿ ಪೊಗಳಲು॥ ೩||
ಹೇಮವಸನನ ಕೋಮಲರೂಪನ
ಭಾಮಕಾಂತನ ಪ್ರೇಮದ ನಾಮವು ||೪||
ಪನ್ನಗಶಯನನ ಚಿನ್ಮಯರೂಪನ
ಸನ್ನುತಿಸಲಿಕೆ ಪ್ರಸನ್ನನ ನಾಮವು ||೫||
0 ಕಾಮೆಂಟ್‌ಗಳು