|| ಗುರು ಸ್ತುತಿ ||
ನಿನ್ನ ನಂಬಿ ಧನ್ಯನಾದೆನೊ
ಗುರುದೇವರಾಯ..............ಪ॥
ನಿನ್ನ ನಂಬಿ ಧನ್ಯನಾದೆ
ಜನುಮ ಜನುಮ ಪಾಪ ನಾಶ
ನೀನೆ ಗತಿಯೆಂದು ನೆಂಬದ
ಎನ್ನ ನೀನು ದ್ಧರಿಸಿದೆ.... ॥ ಅ.ಪ. ॥
ನಾಮ ಮಂತ್ರವನ್ನು ಕೊಟ್ಟೆ
ನಾಯದಿಂದ ರೂಪವೆಂದ್ರೆ
ನಾಮವನ್ನು ಸತತ ಸ್ಮರಿಸೆ
ದೇವ ದೂರವಿಲ್ಲ ವೆಂದೆ.... ॥ ೧ ॥
ದುರ್ಲಭವೀ ಮನುಜ ಜನುಮ
ಬರಲಾರದು ಮರಳಿ ಮರಳಿ
ಗುರುವು ಹೇಳಿದಂತೆ ನಡೆಯೆ
ಇದೇ ಜನುಮ ಕಡೆ ತಿಳಿಯೆ... ॥ ೨ ॥
ನೇಮ ನಿಷ್ಠೆ ಅಪರಂಪಾರ
ಭಕ್ತ ಜನಕೆ ತಿಳುಹಿದೆ ಅಪಾರ
ಭಕ್ತ ಜನಕೆ ನೀ ಮಂದಾರ
ಶಿಷ್ಯಗಣಕೆ ನೀ ಮಂದಾರ
ಧನ್ಯ ಧನ್ಯ ಗುರುರಾಯ
ಧನ್ಯ ಧನ್ಯ ಗುರುರಾಯ..... ॥ ೩॥
0 ಕಾಮೆಂಟ್‌ಗಳು