ಜಯ ಜಯ ಶ್ರೀಹರಿಪ್ರಿಯೆ ಜಯಕ್ಷೀರಾಂಬುಧಿತನಯೇ - Jaya Jaya Sri Hapriprade

 || ಲಕ್ಷ್ಮಿ ಹಾಡು ||

ಕಾರ್ಪರ ನರಸಿಂಹದಾಸರ ಕೃತಿ



ಜಯ ಜಯ ಶ್ರೀಹರಿಪ್ರಿಯೆ

ಜಯಕ್ಷೀರಾಂಬುಧಿತನಯೇ 

ಜಯ ಜಯ ಕೋಮಲಕಾಯೆ

ಬಿಡದೆನ್ನನು ಕಾಯೆ || ಪ ||


ಜಯ ರತ್ನಾಕರ ತನಯೆ

ಕುರುಕರುಣಾಮಯಿ ಸದಯೆ 

ಹರಿ ವಕ್ಷ ಸ್ಥಳ ನಿಲಯೆ

ಸುರ ಮುಖ ಗೇಯೆ  ||೧||


ಜಯ ಜಯ ಪಾವನ ಚರಿತೆ

ಜಯಚತುರಾನನ ಮಾತೆ 

ಜಯ ಭಕುತಾಭಯ ದಾತೆ

ನಮಿಸುವೆ ಭೂಜಾತೆ ||೨||


ಜಯ ಜಯ ಕಾರ್ಪರ ಸದನೆ

ಜಯನರಸಿಂಹನ ರಾಣಿ 

ಸುರ ಸಂಸೇವಿತ ಚರಣೆ

ಪಾಹಿ ಜಗಜ್ಜನನಿ ||೩||


 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು