ಶರಣು ಶರಣಯ್ಯ ಶರಣು ಬೆನಕ - Sharanu Sharanayya Sharanu Benaka

|| ಗಣಪತಿ ಸ್ತುತಿ ||


ಶರಣು ಶರಣಯ್ಯ ಶರಣು ಬೆನಕ 

ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ ||ಪ ||

ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ ಸುಖ

ತಂದೆ ಕಾಯೊ ನಮ್ಮ ಕರಿಮುಖ||ಅ.ಪ.||


ಎಲ್ಲಾರು ಒಂದಾಗಿ ನಿನ್ನ 

ನಮಿಸಿ ನಲಿಯೋದು ನೋಡೋಕೆ ಚೆನ್ನ

ಗರಿಕೆ ತಂದರೆ ನೀನು ಕೊಡುವೆ ವರವನ್ನ 

ಗತಿ ನೀನೆ ಗಣಪನೆ ಕೈ ಹಿಡಿಯೊ ಮುನ್ನ ||೧||


ಸೂರ್ಯನೆದುರಲಿ ಮಂಜು ಕರಗುವ ರೀತಿ 

ನಿನ್ನ ನೆನೆಯಲು ಒಡನೆ ಓಡುವುದು ಭೀತಿ 

ನೀಡಯ್ಯ ಕಷ್ಟಗಳ ಗೆಲ್ಲುವ ಶಕುತಿ

ತೋರಯ್ಯ ನಮ್ಮಲ್ಲಿ ನಿನ್ನಯ ಪ್ರೀತಿ    ||೨||


ಬೆನಕ ಬೆನಕ ಏಕದಂತ

ಪಚ್ಚೆಕಲ್ಲು ಪಾಣಿಮೆಟ್ಲು

ಒಪ್ಪುವ ವಿಫ್ನೇಶ್ವರ ನಿನಗೆ

ಇಪ್ಪತ್ತೊಂದು ನಮಸ್ಕಾರಗಳು || ೩||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು