||ಶ್ರೀ ಶ್ರೀ ಶ್ರೀ ಭಾರತಿ ತೀರ್ಥ
ಸನ್ನಿಧಾನಂಗಳವರ ಸ್ತುತಿ||
ವರಗುರು ಭಾರತೀತೀರ್ಥರ ನಂಬಿರುವ
ಯಾರಿಗೂ ಬವಣೆಯು ಬಾರದು |
ಶಾರದೆಗೆ ನಮಿಪ ವೇದ ಪಾರಾಂಗತ
ಬೀರುತ ಕರುಣೆಯ ಹರಸುವರು ಎಂದೂ | |
ಶಾಂಕರ ದಕ್ಷಿಣ ಪೀಠಾಧೀಶರು
ಶಂಕರ ರೂಪರು ಚಿನ್ಮಯರು
ಸನ್ಮತಿ ನೀಡುತ ಮಾನವ ಕುಲಕೆಲ್ಲಾ
ಉನ್ನತಿ ತೋರುವ ಪಾಲಕರು || ೧||
ಕಾಷಾಯಾಂಬರ ಧರಿಸಿಹ ಗುರುವರ
ಭಾಷಾಜ್ಞಾನಿಯೂ ಗುಣನಿಧಿಯೂ | |
ವಿದ್ಯಾತೀರ್ಥರ ಕರಸಂಜಾತರು
ವಿದ್ಯಾವಿಶಾರದ ಶ್ರೀಯುತರು
ಭೂಸುರ ಪೂಜಿತ ಜನಕೋಟಿ ವಂದಿತ
ನೇಸರಕಾಂತಿಯ ಪ್ರಭೆಯವರು ||
ಭವ ಪಾದಾಬು ಪಾದಾಂಬುಜಾಸಕ್ತಂ
ಭವನಾಂ ಗುಣಸಂಪದಾಂ
ಭವ ವಿಚ್ಛಿತ್ತಯೇ ಭಕ್ತ್ಯಾ ಭಾರತಿ ತೀರ್ಥ ಮಾಶ್ರಯೆ ||
0 ಕಾಮೆಂಟ್ಗಳು