ಅಕ್ಕರೆಯಿಲ್ಲದ ಸಕ್ಕರೆತುಪ್ಪ ತಿನ್ನಬೇಡಿರೋ - Akkareyillada Sakkare Tuppa Thinnabediro

 ರಾಗ : ಚಾಂದ್‌

ತಾಳ : ಆದಿ 

kannadabhajanlyrics.com
kannadabhajanlyrics.com


ಅಕ್ಕರೆಯಿಲ್ಲದ ಸಕ್ಕರೆತುಪ್ಪ |ತಿನ್ನಬೇಡಿರೋ ||

ಲೆಕ್ಕವಿಲ್ಲದ ಮಾತುಗಳನ್ನು |ಆಡಬೇಡಿರೋ ||

ನಿತ್ಯವು ರಾಮ ಧ್ಯಾನವನ್ನು|ನೀವು ಮಾಡಿರೋ ॥

ಸತ್ಯದಿಂದಲಿ ಸದ್ಭಕ್ತರು| ನೀವು ಆಗಿರೋ ॥ ೧.


ಆಗುಹೋಗುಗಳನು ನೀವು |ಬೇಗತಿಳಿಯಿರೋ ||

ನಿತ್ಯಾನಂದರ ಪಾದವನ್ನು ನೀವು ಸೇರಿರೋ ॥ 

ನಿತ್ಯ ತೃಪ್ತಿಯನ್ನು । ನೀವು । ಇಲ್ಲೇ ಪಡೆಯಿರೋ ।

ನಿಗಮ ಗೋಚರ|ಪಾದಭಜನೆ|ಬಿಡದೆ ಮಾಡಿರೋ॥ 

||ಅಕ್ಕರೆಯಿಲ್ಲದ ॥ ೨.


ನೀವು ಮಾಡಿದ । ಪಾಪಗಳನು । ಕಳೆದುಕೊಳ್ಳಿರೋ । 

ಆಗ ಈಗ ಎನ್ನದಂತೆ । ಧ್ಯಾನವಮಾಡಿರೋ ॥

ಹೊತ್ತುಕಾಲ ಇಲ್ಲದಂತೆ । ಕುಳಿತುಕೊಳ್ಳಿರೋ । 

ನಿದ್ದೆಮುದ್ದೆ ತಡೆದು ನೀವು ಧ್ಯಾನವ ಮಾಡಿರೋ||೩.


ಆಸೆಯೆಂಬುದ ಬಿಟ್ಟು ನೀವು । ಆತನ ಸೇರಿರೋ ।

ಸತ್ಯಮೂರ್ತಿಯ ಪಾದವನ್ನು ನೀವು ಸೇರಿರೋ ॥

ಸಣ್ಣಪುಟ್ಟ ಮಾತುಗಳನು । ಆಡಬೇಡಿರೋ ।

ಅಲ್ಲಿ ಇಲ್ಲಿ ಎಂಬುದನ್ನು | ಬಿಟ್ಟುಬಿಡಿರೋ ॥ ೪.


ಸೊಕ್ಕಿನಿಂದಲಿ ನೀವು ಇದ್ದು ಮೆರೆಯಬೇಡಿರೋ ।

ರಾಮನಾಮದ ಭಜನೆಯನ್ನು ತಪ್ಪದೆ ಮಾಡಿರೋ ॥

ಪಾಪಪುಣ್ಯವನ್ನು ನೀವು ತಿಳಿದು ನಡೆಯಿರೋ ।

ಪುರಂದರ ವಿಠಲನ ಪಾದಸೇವೆ|ನೀವು ಮಾಡಿರೋ||೫.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು