||ಶಿವ ಸ್ತುತಿ ||
ರಾಗ : ದೇಶ್
ತಾಳ : ಆದಿ
kannadabhajanlyrics.com |
ಶಿವನನಾಮವ ಸ್ಮರಿಸಲೋ ಮನವೇ ।
ವಿವರಿಸಿ ಜ್ಞಾನವೇ ತಿಳಿ ಮನವೇ ||
ಅವಗುಣ ಅಳಿದು | ಆತ್ಮವ ತಿಳಿಯೋ |
ಭವಸಾಗರ ದಾಟೆಲೊ ಮನವೇ||ಶಿವನಾಮವ||ಪ.
॥ ಸುಳ್ಳಿನ ಸಂಸಾರ । ಎಲೊ ಮನವೇ ।
ಇದು ಎಳ್ಳಷ್ಟು ಸುಖವಿಲ್ಲ ಎಲೋ ಮನವೇ
ಮಳ್ಳುತನವ ಬಿಡು ಎಲೊ ಮನವೇ|
ಇದು|ಪೆಳ್ಳಿನೊಳಗೆ ಪಕ್ಷಿ |ತಿಳಿ ಮನವೇ ||೧.
॥ ಹೆಂಡರು ಮಕ್ಕಳು । ಎಲೊ ಮನವೇ । ನಿನ್ನ।
ಹಿಂಡಿ ಹಿಚಕಿ ಹಾಕ್ವರೆಲೋ ಮನವೇ ॥
ಕಂಡಂತೆ ಕುಣಿಶ್ಯಾಡಿ । ಬಂದು ಮಾಡುವರು ।
ಖಂಡಿತ ಮಾತಿದು । ತಿಳಿಮನವೇ ॥ ಶಿವನಾಮವ ॥ ೨.
॥ ಇಚ್ಛೆ ಬಂತೆಲೋ । ಎಲೊ ಮನವೇ ।ನೀ।
ಹುಚ್ಚೆದ್ದು ಕುಣಿಯ ಬೇಡಲೋ ಮನವೇ ॥
ಎಚ್ಚರವಿಟ್ಟು ಯಾರೆಂಬುದನ್ನು|ನಿಶ್ಚಯ ಮಾಡಿಕೋ।
ಎಲೊ ಮನವೇ ॥ ಶಿವ ನಾಮವ ॥ ೩.
॥ ಯಾರಿಗೆ ಯಾರಿಲ್ಲೋ|ಎಲೆ ಮನವೇ ।ನಾ।
ಸಾರಿಹೇಳುವೆ ಸತ್ಯ|ತಿಳಿಮುನವೇ ||
ಮೂರು ದಿನದಾ ಸಂತೆ|ಎಲೊ ಮನವೇ । ಈ ।
ಶರೀರದಾ ಭಾಂತಿ ತಿಳಿಮನವೇ॥ಶಿವನಾಮವ||೪.
ಇಂತು ತಿಳಿದು|ನೀ ನಡೆ ಮನವೇ ನೀ|
ಸಂತೋಷ ಸುಖದೋ|ಳಿರುಮನವೇ ॥
ಶಾ೦ತಶ್ರೀ|ಗುರುವರ|ಧ್ಯಾನದೊಳಿರು ಕಾ|ತೇಂಶನ ।
ಒಡಗೂಡಲೆ ಮನವೇ ॥ ॥ ಶಿವನಾಮವ ಸ್ಮರಿಸಲೆ|೫.
2 ಕಾಮೆಂಟ್‌ಗಳು
ದಯವಿಟ್ಟು
ಪ್ರತ್ಯುತ್ತರಅಳಿಸಿದಯವಿಟ್ಟು ವಿಡಿಯೋ ಮತ್ತು ಚಿತ್ರಗಳ ನು ಹಾಕಿ
ಪ್ರತ್ಯುತ್ತರಅಳಿಸಿ