ಎನ್ನ ಕಂದಾ ಹಳ್ಳಿಯ ಹನುಮ - Enna Kanda Halliya Hanuma

 ॥ ಹನುಮ ಸ್ತುತಿ ॥ 

ರಾಗ : ಜಂಜೂಟಿ

ತಾಳ:-ತ್ರಿಷ ನಡೆ 



ಎನ್ನ ಕಂದಾ । ಹಳ್ಳಿಯ ಹನುಮ ||

ಚೆನ್ನಾಗಿ ಇಹರೇ|ಲಕ್ಷ್ಮಣ ದೇವರು||ಎನ್ನ ಕಂದಾ||ಪ. 


ತುಪ್ಪ ಪಂಚಾಮೃತವಂದು । ಅಡವಿಗಡ್ಡೆಳಿಂದು ॥

ಕರ್ಪೂರ ವೀಳ್ಯವಂದು । ಕರುಪು ಇಂದು ॥

ಸುಪ್ಪತ್ತಿಗೆ ಮಂಚವಂದು । ಹುಲ್ಲ ಹಾಸಿಗೆ ಇಂದು ॥

ಶ್ರೀಪತಿ ರಾಘವ । ಕ್ಷೇಮಾದೊಳೈದಾರೆ ॥

ಶ್ರೀಪತಿ ॥ ಎನ್ನ ಕಂದಾ ॥ ೧.


॥ ನವವಸ್ತ್ರಗಳು ಅಂದು । ನಾರಸೀರೆಗಳಿಂದು ॥

ಹೂವಿನದಂಟು ಅಂದು । ಜಟೆಗಳಿಂದು ॥

ಜವಾದಿ ಕಸ್ತೂರಿ ಅಂದು । ಭಸಿತ ಧೂಳಿ ಇಂದು ॥

ಶ್ರೀವರ ರಾಘವ । ಕ್ಷೇಮಾದೊಳೈದಾರೆ ॥

ಶ್ರೀವರ ॥ ಎನ್ನ ಕಂದಾ ॥ ೨.


॥ ಕನಕರಥಗಳಂದು । ಕಾಲನಡಿಗೆ ಇಂದು ||

ಘನಸತ್ತಿಗೆಯಂದು । ಬಿಸಿಲು ಇಂದು ॥

ಸನಕಾದಿಗಳೋಲೈಪ । ಆದಿಕೇಶವ ನಮ್ಮ ॥

ಹನುಮೇಶ ರಾಘವ । ಕ್ಷೇಮಾದೊಳೈದಾರೆ ॥

ಹನುಮೇಶ ॥ ಎನ್ನ ಕಂದಾ ॥ ೩.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು