|| ಗುರು ಮಹಿಮಾ ಸ್ತುತಿ ||
kannadabhajanlyrics.com |
ಶಿರಬಾಗಿ ಕೊಂಡಾಡಿ ಸ್ತುತಿಸುವೆ ಬೇಡುವೆ ವರಗಳ
ಗುರು ಶಂಕರಾರ್ಯ ಪದಾಬ್ಬವ ||ಪಲ್ಲವಿ||
ಕಾಮಿತಾರ್ಥವನಿತ್ತು ಪ್ರೇಮದಿಂ ಸಲಹುವ
ಆ ಮಹಿಮಾ ಗುಣಧಾಮರ ||೧||
ಚಿನುಮಯ ಚಂದ್ರಮೌಳೀಶ ಪೂಜಕರಾದ
ಷಣ್ಮತ ಸ್ಥಾಪನಾಚಾರ್ಯರ ||೨||
ಸುರುಚಿರ ಶೃಂಗೇರಿ ಪುರದೊಳು ನೆಲೆಸಿರುವ
ನರಸಿಂಹ ಭಾರತಿ ಪ್ರೀಯರ ||೩||
0 ಕಾಮೆಂಟ್‌ಗಳು