ನಾಳೆ ಎಂಬನ ಮನೆಹಾಳು Nale Embana Mane Halu

||ತತ್ವ ಪದ ||

ರಾಗ : ಬಿಲಹರಿ

ತಾಳ : ಛಾಪು

kannadabhajanlyrics.com
kannadabhajanlyrics.com


|| ನಾಳೆ ಎಂಬನ ಮನೆ ಹಾಳು ||

ನೀನು ನಾಳಿತನಕಿರುವುದು ನಿಜವೇನು ಹೇಳು ||

ನಾಳೆ ಎಂಬನ ಮನೆಹಾಳು ||ಪ ||


॥ ಕ್ಷಣಭಂಗುರವು ಎನ್ನಿಸಿದೆ । 

ನಿನ್ನ ತನುವು ಆ ಚಂದ್ರಾರ್ಕವಾಗಿ ನಿಲುವುದೇ ॥

ದಿನವೂ ರೋಗದಿ ಸಾಯುತಿರುವೆ । 

ಇದನು ಮನದೊಳಗರಿತು|ಶ್ರೀಘ್ರದಿ ಮುಕ್ತನಾಗೇ||

॥ ನಾಳೆ ಎಂಬನ ಮನೆಹಾಳು ||೧||


 ಹಾಳು ವಾದವ ಮಾಡಬಲ್ಲೆ | ನಿನ್ನ।

ಮೂಲತತ್ವ ಕಿವಿಯಲಿ | ಕೇಳಾಲೇ ಒಲ್ಲೆ ॥

ಖೂಳ ಕುಹಕ ವಿದ್ಯೆಬಲ್ಲೆ । ಎಷ್ಟು |

ಹೇಳಲು ಆಸೆ ಮೋಹವ ಬಿಡಲೊಲ್ಲೆ 

॥ ನಾಳೆ ಎಂಬನ ಮನೆಹಾಳು ||೨||


॥ ಕೊಡದೇಕಾದರೆ ನಾಳೆ ಎಂದೆ । 

ಕಟ್ಟಿ ಇಡಬೇಕಾದರೆ । ಎನ್ನದೀಗಲೇ ಎಂಬೆ ||

ಮಡದಿ ಮಕ್ಕಳಿಗಿರಲೆಂಬೆ । 

ನಾಳೆ ರುಡಿಯುವ ಯಮಭಟರು ಗಳಿಗೇನೆಂಬೆ ||

ನಾಳೆ ಎಂಬನ ಮನೆಹಾಳು ||೩||


॥ ಬರುವಾ ಕಾಲದಿ ಬರಿಗೈಯಿ ।

ನೀನು ಹೊರಡುವ ಕಾಲದೊಳದೇ ಬರಿಗೈಯಿ ॥

ಪರರನ್ನು ಜರಿಯುವ ಬಾಯಿ ।

ಇಹಪರ ಕಾಣದಾಡುವ । ತಲೆ ಹುಳಿತ ನಾಯಿ ॥ 

ನಾಳೆ ಎಂಬನ ಮನೆಹಾಳು ||೪||


||ವಿರತಿ ಸದ್ಭಕ್ತಿಯ ತಾಳು | ಕೆಟ್ಟ ದುರಿತದಿಂ ।

ಕುದಿಯುವುದ್ಯಾತರ ಬಾಳು ||

ನಾಳೆ ಎಂಬನ ಮನೆಹಾಳು ॥ 

ಸ್ಥಿರಮುಕ್ತಿ ಕಾಂತಯನಾಳು ।

ನಮ್ಮ ಗುರುಮಹಲಿಂಗನ ವಚನವ ಕೇಳು ||೫||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು