|| ಶ್ರೀ ಗಣೇಶ ಸ್ತುತಿ ||
ಗಣೇಶ ಶರಣಂ ಶರಣು ಗಣೇಶ
ಗಣೇಶ ಶರಣಂ ಶರಣು ಗಣೇಶ ||ಪಲ್ಲವಿ||
ಅನುಪಮ ಮಹಿಮ ಸಾರ ಗಣೇಶ ।
ಆದಿ ಪೂಜ್ಯ ನುತ ದೇವ ಗಣೇಶ |
ಇಷ್ಟ ಫಲಪ್ರದ ಸುಮುಖ ಗಣೇಶ ।
ಈಶ ತನಯ ಮಹನೀಯ ಗಣೇಶ ।
ಉರಗ ವಿಭೂಷಣ ವಿಮುಖ ಗಣೇಶ ।
ಊರ್ಜಿತ ದನುಜ ನಿಪಾತ ಗಣೇಶ ॥
ಋಷಿಗಣ ವಂದಿತ ವರದ ಗಣೇಶ ।
ಋಕಾರ ಪ್ರಿಯ ಪೊರೆವ ಗಣೇಶ ॥
ಎಡರುಗಳನು ಕಡಿದಿಡುವ ಗಣೇಶ ।
ಏಕದಂತ ನಿತ್ಯಾತ್ಮ ಗಣೇಶ |
ಐಕಮತ್ಯ ನಿಕ್ಷೇಪ ಗಣೇಶ ।
ಒಲಿಯುತ ಭಕ್ತರ ಪೊರವ ಗಣೇಶ |
ಓಂಕಾರಾನ್ವಿತ ದೇವ ಗಣೇಶ ।
ಔಪಾಸಕರಭಿಮಾನಿ ಗಣೇಶ |
ಅಂಬಾ ಪ್ರಿಯತನುಜಾತ ಗಣೇಶ ।
ಅವಹತ ಶತ್ರುವಿನಾಶ ಗಣೇಶ |
ಕರುಣಾಕರ ಕಮನೀಯ ಗಣೇಶ |
ಖೇಚರ ಗಾನಾನಂದ ಗಣೇಶ |
ಗಜಮುಖ ನಾಮದಿ ಮೆರೆವ ಗಣೇಶ |
ಘಾತುಕ ದುರ್ಜನ ಭಂಗ ಗಣೇಶ |
ಔಂಗ್ಯೋದ್ಭವ ಲಿಂಗೈಕ್ಯ ಗಣೇಶ |
ಚಂದ್ರ ಗರ್ವ ವಿಧ್ವಂಸ ಗಣೇಶ ।
ಛತ್ರಾಲಂಕೃತ ಚೆಲುವ ಗಣೇಶ |
ಜನನ ಮರಣ ಭಯ ರಹಿತ ಗಣೇಶ ॥
ಝಂಕೃತಿ ಕಿಂಕಿಣಿ ನಾದ ಗಣೇಶ |
ಜ್ಞಾನಗಮ್ಯ ಸರ್ವಜ್ಞ ಗಣೇಶ ।
ಟಂಕ ಪಾಶತರ ದೋಷ ಗಣೇಶ ।
ಠಕಾರೋಪಮ ಜಠರ ಗಣೇಶ |
ಡಮರುಗ ಹಸ್ತ ಸುಪುತ್ರ ಗಣೇಶ ।
ಢಕ್ಕಾನಾದ ಲೋಲ ಗಣೇಶ |
ಣತಪರಿಪಾಲನ ನಿಪುಣ ಗಣೇಶ ।
ತತ್ವ ಜ್ಞಾನಾನಂದ ಗಣೇಶ ।
ಥಳಿಥಳಿ ಪಾಪಳಿ ನಿಪುಣ ಗಣೇಶ |
ದ್ವೈಮಾತುರ ವಿಘ್ನೇಶ ಗಣೇಶ ।
ಧುಂಡು ವಿನಾಯಕ ವಿನುತ ಗಣೇಶ ।
ನಾಗಸೂತ್ರಧರ ಶಾಯ ಗಣೇಶ |
ಪರಮ ಪುರುಷನವತಾರ ಗಣೇಶ ।
ಫಾಲ ಚಂದ್ರಧರ ಲೀಲ ಗಣೇಶ |
ಬ್ರಹ್ಮಚರ್ಯ ವ್ರತ ನಿಷ್ಠ ಗಣೇಶ ।
ಭಾರತ ಲೇಖನ ಚತುರ ಗಣೇಶ |
ಮೂಷಿಕ ವಾಹನ ಧೀರ ಗಣೇಶ |
ಯದುಕುಲ ನಂದನ ನಮಿತ ಗಣೇಶ ।
ರಾಮಚಂದ್ರ ಸಂಪೂಜ್ಯ ಗಣೇಶ |
ಲಂಬೋದರ ಹೇರಂಬ ಗಣೇಶ ।
ವಕ್ರ ತುಂಡ ರಿಪುಗಂಡ ಗಣೇಶ |
ಶೂರ್ಪಕರ್ಣ ಸುಕುಮಾರ ಗಣೇಶ ।
ಷಣ್ಮುಖ ಸೋದರ ಸಿದ್ದಿ ಗಣೇಶ |
ಸಕಲಕಲಾ ಪರಿಪೂರ್ಣ ಗಣೇಶ ।
ಹರಿಹರ ಇನಸುತ ವಿನುತ ಗಣೇಶ |
ಅಕ್ಷರ ಮಾಲೆಯ ಸ್ತೋತ್ರ ಗಣೇಶ ।
0 ಕಾಮೆಂಟ್‌ಗಳು