ಗುರುವೆ ನಿಮ್ಮಾಜ್ಞೆಯನು ಮೀರದೆ ನಡೆದವನು - Guruve Nimmajneyanu Meerade Nadedavanu

 ||ಗುರು ಸ್ತುತಿ ||

ರಚನೆ : ಶ್ರೀ ಕೂಡಲೂರೇಶ

kannadabhajanlyrics.com
kannadabhajanlyrics.com


ಗುರುವೆ ನಿಮ್ಮಾಜ್ಞೆಯನು ಮೀರದೆ ನಡೆದವನು

ನರನೆನ್ನಲು ಬೇಡ ಅವ ಪರಮಾತ್ಮನು ||ಪಲ್ಲವಿ|| 

ಅರಿಯದ ಮನುಜರು ಅವರೇನು ಬಲ್ಲರು । 

ಪರಕೆ ಪರತರವಾದ ಪರವಸ್ತು ಅವನು ॥ ಅ.ಪ. ॥ 


ಹೆಪ್ಪು ಹಾಲಿಗೆ ಕೊಡಲು, ತುಪ್ಪ ಅದರೊಳಗಾಗಿ 

ತುಪ್ಪ ಕೂಡುವುದೆ ಮರಳಿ ಹಾಲಿನೊಳು । 

ನಿಷ್ಪತ್ತಿ ನಿಜರೂಪನಾದಂಥ ಪುರುಷನು 

ಅಪ್ಪಿ ಸಂಸಾರಕ್ಕೆ ಒಳಗಾಗನವನು ॥೧॥ 


ನದಿಯು ತಾ ಪುಟ್ಟಿ ಅದು ಸಮುದ್ರವ ಸೇರಲು 

ನದಿಯು ತಾ ಪೋಗುವದೆ ಪುಟ್ಟಿದೆಡೆಗೆ । 

ಸದಮಲ ಸುಜ್ಜಾನಿ ಪ್ರಪಂಚ ಮಾಡಲು 

ಅದರೊಳು ಕೂಡಿದರೂ ಬೆರೆಯನು ಅವನು ||೨॥  


ಮುತ್ತು ನೀರೊಳು ಪುಟ್ಟಿ , ಮತ್ತೆ ನೀರಾಗುವದೆ |

ಮುತ್ತು ಲಕ್ಷಾಂತರಕೆ ಬೆಲೆಯಾದೀತು । 

ತತ್ತದ ಜ್ಞಾನಿಯವನು ಹುಟ್ಟುವ ನರನಲ್ಲ । 

ಅತ್ಯಂತ ಆನಂದ ಪರಿಪೂರ್ಣನವನು ॥ ೩॥ 


ಗರುಡನ ಮಂತ್ರವನು ಕಲಿತಿರುವಾತಗೆ 

ಉರಗ ಕಚ್ಚಿದರೇನು ವಿಷವೇರುವದೆ । 

ಪರಿಪರಿ ವಿಷಯದೊಳ್‌ ಮುಳುಗಾಡಿದರಾತಗೆ 

ಧರ್ಮ ಕರ್ಮಗಳಿಂದ ಆತನಿಗೇನು ॥ ೪॥ 


ಜಾತಿಯೊಳಗೆ ಹುಟ್ಟ ಅಜಾತನಾದವಗೆ 

ಜಾತಿ ಧರ್ಮಗಳಿಂದ ಆತನಿಗೇನು । 

ಜ್ಯೋತಿಪ್ರಕಾಶ ನಮ್ಮ ಕೂಡಲೂರೇಶನು 

ದಾತ ಪ್ರಖ್ಯಾತ ಅವಧೂತನವನು ॥೫॥ 














ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು