ಹುಡುಗಾಟ ಆಡಬೇಡಿರೋ ಭಜನೆಯಲ್ಲಿ - Hudugata Adabediro Bhajaneyalli

ರಚನೆ : ಶ್ರೀ ಸದ್ಗುರು ಬಿಂದುಮಾಧವ ಸ್ವಾಮೀಜಿ 

ರಾಗ : ಚಾಂದ್

ತಾಳ : ಆದಿ 

kannadabhajanlyrics.com
kannadabhajanlyrics.com, belaguru swamiji photo

॥ ಹುಡುಗಾಟ ಆಡಬೇಡಿರೋ । ಭಜನೆಯಲ್ಲಿ ।

ಹುಡುಗಾಟ ಆಡಬೇಡಿರೋ


ತಂಟೆ ತಕರಾರು ಮಾಡಬೇಡಿ ।

ತಾರಕನಾಮವ । ನೀವುಹಾಡಿ

ಎದ್ದುಎದ್ದು ಹೋಗಬೇಡಿ |

ಕುಳಿತು ರಾಮರಧ್ಯಾನವ ಮಾಡಿ 

|| ಹುಡುಗಾಟ || ೧.


॥ ತಾಳ ದಮ್ಮಡಿ ಬೇಕಿಲ್ಲ|

ತಂತಿವಾದ್ಯವು ಬೇಕೇ ಇಲ್ಲ||

ಭಕ್ತಿ ಎಂಬುವ | ತಂಬೂರಿ ಹಿಡಿದು ।

ತಾರಕ ನಾಮವ ನೀವು ಹಾಡಿ ॥ ಹುಡುಗಾಟ |


ಜ್ಞಾನವೆಂಬೊ || ತಂತಿಯಕಟ್ಟಿ |

ನಾದವೆಂಬೊ । ಶಬ್ಧವ ಹೊರಡಿಸಿ ॥

ನಾರಾಯಣನ ಧ್ಯಾನವ ಮಾಡಿ ।

ಮಾರುತಿ ರಾಯನ ಭಜನೆಯ ಮಾಡಿ।ಹುಡುಗಾಟ ॥ 


॥ ವಾಸುದೇವನ ಸೇವೆಯ ಮಾಡಿ|

ವಾಸುಕಿ ಶಯನನ ಭಜನೆಯ ಮಾಡಿ ||

ವಸುದೇವ ಸುತನ । ಧ್ಯಾನವ ಮಾಡಿ ॥

ವಾಮನ ಮೂರ್ತಿಯ ದರ್ಶನ ಮಾಡಿ ॥ ಹುಡುಗಾಟ




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು