ಒಂದೇ ನಾಮವು ಸಲದೇ ಶ್ರೀಹರಿಯೆಂಬ - Onde Namavu Salade Sri Hariyemba

 ॥ ಹರಿನಾಮ ಸ್ತುತಿ ॥ 

ರಾಗ : ಕಲ್ಯಾಣಿ

ತಾಳ : ಛಾಪು 



 ಒಂದೇ ನಾಮವು ಸಲದೇ । ಶ್ರೀಹರಿಯೆಂಬ ।

ಒಂದೇ ನಾಮವು ಸಾಲದೇ ॥

ಒಂದೇ ನಾಮವು ಭವ । ಬಂಧನವ ಬಿಡಿಸುವುದು ॥

ಎಂದು ವೇದಂಗಳು । ಆನಂದದಿ ಸ್ತುತಿಸುವ ॥ ಪ||


ಉಭಯರಾಯರು|ಸಮ್ಯಕದಿ ಲೆತ್ತವನಾಡೆ ||

ಸಭೆಯೊಳು ಧರ್ಮಜ । ಸತಿಯ ಸೋಲೆ ॥

ನಭಕೆ ಕೈಯೆತ್ತಿ । ದ್ರೌಪದಿ ಕೃಷ್ಣಾ ಎನಲು ॥

ಇಭರಾಜ ಗಮನೆಗಕ್ಷಯ ವಸ್ತ್ರವ ನಿತ್ತಂಥ||೧|| 


ಹಿಂದೊಬ್ಬ ಋಷಿಪುತ್ರ । ಅಂದು ದಾಸಿಯ ಕೂಡೆ ॥

ಸಂದೇಹವಲ್ಲದೆ । ಹಲವು ಕಾಲ ॥

ದಂದುಗದೊಳು ಸಿಲುಕಿ । ನಿಂದಂತ್ಯಕಾಲದಿ ॥

ಕಂದ ನಾರಗನೆಂದು । ಕರೆಯಲಭಯವನಿತ್ತ ||೨||


ಕಾಶಿಯ ಪುರದೊಳು । ಈಶ ಭಕುತಿಯಿಂದ ॥

ಸಾಸಿರ ನಾಮದ । ರಾಮಾ ಎಂಬಾ ||

ಶ್ರೀಶನ ನಾಮದ । ಉಪದೇಶ ಸತಿಗಿತ್ತ||

ವಾಸುದೇವ ಸಿರಿ ಪುರಂದರ ವಿಠಲನಾ ||೩||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು