ಹನುಮ ಸ್ತುತಿ - ಹನುಮಂತನೇ ಗುಣವಂತನೇ, Hanumanthane Gunavanthane

ಹನುಮ ಸ್ತುತಿ - ಹನುಮಂತನೇ ಗುಣವಂತನೇ, Hanumanthane Gunavanthane bhajan lyrics in kannada ॥ ಹನುಮ ಸ್ತುತಿ ॥ 

( ಸದ್ಗುರು ಬಿಂಧುಮಾಧವರ ವಿರಚಿತ) 

ರಾಗ : ಉದಯರವಿಚಂದ್ರಿಕೆ 

ತಾಳ : ಆದಿ 

kannadabhajanlyrics.blogspot.com
kannadabhajanlyrics.blogspot.com


॥ ಹನುಮಂತನೇ । ಗುಣವಂತನೇ ।

ಕರಮುಗಿದು ಬೇಡುವೆ ನಾನಿನ್ನ|

ಕೈ ಹಿಡಿದು ನಡೆಸೋ ಮುಂದೆನ್ನ ।

ರಾಮ ರಾಮ ರಾಮ ಸೀತೆ ॥ 

ರಾಮ ರಾಮ ರಾಮ ॥ ಹನುಮಂತನೇ|ಪ.


॥ ನಿನ್ನಂತೆ ಬಾನಲ್ಲಿ ತೇಲಾಡಿಸು ।

ವರವೊಂದು ಬೇಡುವೆನು | ದಯಪಾಲಿಸು ॥ 

ಹನುಮಂತನೇ ಬಾರಯ್ಯ ಚೈತನ್ಯ । ಮಹದೇವನೇ ॥

ರಾಮಧೂತನೇ ಕರಮುಗಿದು ಬೇಡುವೆ ನಾನಿನ್ನ | 

ಕೈ ಹಿಡಿದು ನಡೆಸೋ ಮುಂದೆನ್ನಾ ॥ 

ರಾಮ ರಾಮ ರಾಮ ಸೀತ|ರಾಮ ರಾಮ ರಾಮ॥೧.


॥ ಗುಡಿಯಲ್ಲಿ ಶಿಲೆಯಾಗಿ ನೀ ನಿಂತೆಯಾ ।

ಜಗದೊಳಗೆ ಅನ್ಯಾಯ ನೀ ಕಾಣೆಯಾ | 

ಹನುಮಂತನೇ|ಬಾರಯ್ಯ ಚೈತನ್ಯ|ಮಹದೇವನೇ ॥

ರಾಮದೂತನೇ ಕರಮುಗಿದು ಬೇಡುವೆ ನಾನಿನ್ನ | 

ಕೈ ಹಿಡಿದು ಸೋ ಮುಂದೆನ್ನಾ ॥ 

ರಾಮ ರಾಮ ರಾಮ ಸೀತ॥ ರಾಮ ರಾಮ ರಾಮ|೨.


||ಛಳಿಯಲ್ಲಿ ಮಳೆಯಲ್ಲಿ|ತಪಗೈವೆನು |

ಈ ಪ್ರಾಣ ನಿನ್ನಲ್ಲಿ ಮುಡಿಪಿಡುವೆನು ॥

ಹನುಮಂತನೇ|ಬಾರಯ್ಯ ಚೈತನ್ಯ|ಮಹದೇವನೇ ॥ 

ರಾಮದೂತನೇ|ಕರಮುಗಿದು ಬೇಡುವೆ ನಾನಿನ್ನ | 

ಕೈ ಹಿಡಿದು ನಡೆಸೋ ಮುಂದೆನ್ನಾ ॥

ರಾಮ ರಾಮ ರಾಂ ಸೀತ|ರಾಮ ರಾಮ ರಾಮ||೩. 


॥ ಜಲಮೇಲು ಗಿರಿಯನ್ನು । ನೀ ಮಾಡಿದೆ । 

ಲಕ್ಷ್ಮಣನ ಪ್ರಾಣವ ಕಾಪಾಡಿದೆ ॥

ಹನುಮಂತನೇ|ಬಾರಯ್ಯ ಚೈತನ್ಯ|ಮಹದೇವನೇ॥

ರಾಮದೂತನೇ|ಕರಮುಗಿದು ಬೇಡುವೆ ನಾನಿನ್ನ । 

ಕೈ ಹಿಡಿದು ನಡೆಸೋ ಮುಂದೆನ್ನಾ ॥

ರಾಮ ರಾಮ ರಾಂ ಸೀತ|ರಾಮ ರಾಮ ರಾಮ॥೪.


॥ ಕಪಿಯಂತೆ ನೀನು ಕುಣಿದಾಡಿದೆ । 

ಶ್ರೀ ರಾಮ ಜಯ ರಾಮ ಜಯ ರಾಮನೆಂದು |

ಹನುಮಂತನೇ । ಬಾರಯ್ಯ ಚೈತನ್ಯ । ಮಹದೇವನೇ ॥

ರಾಮದೂತನೇ । ಕರಮುಗಿದು ಬೇಡುವೆ ನಾನಿನ್ನ|

ಕೈ ಹಿಡಿದು ನಡೆಸೋ ಮುಂದೆನ್ನಾ ॥

ರಾಮ ರಾಮ ರಾಂ ಸೀತ|ರಾಮ ರಾಮ ರಾಮ||೫. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು