॥ ಗುರು ಸ್ತುತಿ ॥
ರಾಗ : ಮಧ್ಯಮಾವತಿ
ತಾಳ:ಆದಿ
![]() |
| kannadabhajanlyrics.blogspot.comಗುರು ಸ್ತುತಿ - ಹಿಂದಿನ ರಾತ್ರಿ ಎನಗೆ ಒಂದು ಸ್ವಪ್ನಾ ಬಿದ್ದಿತ್ತಾ, Hindina Raatri Enage Ondu bhajan lyrics in kannada |
॥ ಹಿಂದಿನ ರಾತ್ರಿ । ಎನಗೆ ಒಂದು ಸ್ವಪ್ನಾ ಬಿದ್ದಿತ್ತಾ॥
ಒಂದು ಫಳಿಗೆ ಕಣ್ಣು ತೆರೆದೆ । ಬೆಳಕು ಹರಿದಿತ್ತಾ।
ಸುತ್ತಲು ಬೆಳಕು ಹರಿದಿತ್ತಾ॥ ಪ ||
॥ ಮೋಡ ಮುಸುಕಿದಾಂಗೆ । ಸುತ್ತಲು |
ಕತ್ತಲು | ಕವಿದಿತ್ತಾ॥
ಗುಡುಗು ಹಾಯ್ದು । ಸಿಡಿಲು ಬಡಿದು |
ಎದೆಯ ಹೊಡೆಸಿತ್ತಾ ||ಹಿಂದಿನ ರಾತ್ರಿ ॥ ೧.॥
ಅಷ್ಟರಲ್ಲಿ ಒಬ್ಬ ಅಂಬಿಗ|ಬಂದನು ನಗುನಗುತಾ ॥
ಹುಟ್ಟನು ಶಾಟಿ|ತಲೆಯ ಮೇಲೆ|ನೌಕೆಯ ಹೊತ್ತಾ|
ಹಿಂದಿನ ರಾತ್ರಿ ॥ ೨.
ಏನ ಹೇಳಲಿ ಅವನ ರೂಪು|ಇದ್ದನು ಮನ್ನಥ ॥
ಸಾನುರಾಗದಿ ನೌಕೆಯ ನಡೆಸಿ|ದಂಡೆಗೆ ಬಂದು ನಿಂತಾ
ಹಿಂದಿನ ರಾತ್ರಿ || ೩.
॥ನೀನು ಯಾರು ಎಂದು ಕೇಳಿದೆ|ಗಡ ಗಡ ನಡುಗುತ್ತಾ||
ನಾನು ಗಾಣಗಾ ಪುರದ ಅಂಬಿಗ|ನಗುನಗುತಾ॥
ಹಿಂದಿನ ರಾತ್ರಿ ॥ ೪.
ಭಕ್ತರು ಕರೆವರು ನನ್ನ ಹೆಸರು ದತ್ತಾತ್ರೇಯಾಂತ ॥
ನನ್ನನು ನೆನೆದರೆ ಭವಸಾಗರದಿ|ಮಾಡುವೆನು ಮುಕ್ತಾ॥೫.
ಅನುತನ್ನುತ ಅವನ ಜ್ಯೋತಿ|ಅಡಗಿ ಹೋಗಿತ್ತಾ
ನನ್ನಾ ಪೂರ್ಣ ಪುಣ್ಯದಿಂದ|ಕಂಡೆನು ಗುರುನಾಥ||
ಹಿಂದಿನ ರಾತ್ರಿ ॥ ೬.

0 ಕಾಮೆಂಟ್‌ಗಳು