|| ಗಣಪತಿ ಸ್ತುತಿ ||
ರಾಗಃ ಅಭೇರಿ
ತಾಳ : ಆದಿ
ನಂಬೀದೇ ನಾ ನಿನ್ನ ಗಣಪತೀ |
ಜಗದಂಬಾ ಸುತನೆ ನಿನ್ನ ನಂಬಿದೇ ॥ ಪ ||
ಮುದ್ದು ಗಣೇಶ ನಿನ್ನ ನಂಬಿದೇ |
ಸದ್ಬುದ್ಧಿಯನಿತ್ತು ನೀ ಕಾಯೆಯಾ |
ಸಿದ್ಧಿ ವಿನಾಯಕ ಶಿವಸುತಾ |
ಜಗದಂಬಾ ಸುತನೆ ನಿನ್ನ ನಂಬಿದೆ ||ಅ. ಪ.||
ಇಲಿಯಾ ಮೇಲೇರಿ ನೀ ಬಂದೆಯಾ |
ಇತ್ತ ಮೋದಕ ಕಡುಬನು ತಿಂದೆಯಾ |
ಹೊಟ್ಟೆ ಭಾರದಿ ಜಾರಿ ಬಿದ್ದೆಯಾ |
ನೋಡಿ ನಕ್ಕಾ ಚಂದ್ರಗೆ ಶಾಪ ಕೊಟ್ಟೆಯಾ ॥ ೧ ||
ಆತ್ಮಾ ಲಿಂಗವ ಧರೆಗಿಟ್ಟೆಯಾ |
ಖಳ ಕೊಟ್ಟಾ ಪೆಟ್ಟನು ನೀ ತಿಂದೆಯಾ |
ಇಂದು ಗೋಕರ್ಣದಿ ನಿಂದೆಯಾ |
ಬಂದ ಭಕ್ತಾ ಜನರ ನೀ ಕಾಯ್ದೆಯಾ ॥ ೨ ||

0 ಕಾಮೆಂಟ್‌ಗಳು