ಗಣಪತಿ ಸ್ತುತಿ - ನಮೋ ಲಂಬೋದರಾ ನಮೋ ವಿಘ್ನ ಹರಾ - Namo Lambodara Namo Vighna Hara

|| ಗಣಪತಿ ಸ್ತುತಿ ||

ತಾಳ : ಏಕತಾಳ 



ನಮೋ ಲಂಬೋದರಾ |। ನಮೋ ವಿಘ್ನ ಹರಾ |

ನಮೋ ದೇವಾವರಾ | ಗಜಾನನಾ || ೧ ||


ಸ್ಮರಣ ಮಾತ್ರದಿಂದ | ಸಂಕಟ ಕಳೆಯುವೀ |

ದೇವಿ ಗೌರಿ ತಾಯೀ | ನಂದನನೇ ॥ ೨ ||


ಮೂಷಿಕ ವಾಹನ | ದೋಷ ನಿವಾರಣ |

ಪಾಶಾಂಕುಶಧರ | ಈಶ ಕುವರ || ೩ ||


ಬ್ರಹ್ಮಾನಂದಗೇ ಮತಿ | ಕೊಡೊ ಗಣಪತಿ |

ರಾಮಪಾದ ಭಕ್ತಿ | ಬಿಡದಂತೆ || ೪ ||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು