|| ದತ್ತ ಭಜನೆ ||
ಅಮರ ವರ್ಗಕೆ ಅಭಯ ಸಾರಿದಿ
ಮೂಲ ಸದ್ಗುರು ಪೀಠ ನಿಲಿಸಿದಿ |
ಅನಸೂಯಾ ಸುತಾ ನೀ ತ್ರಿಮೂರುತಿ
ಅತ್ರಿನಂದನಾ ದತ್ತ ಮೂರುತಿ ||
ಪಿಠಾಪುರದೊಳು ಮೈಯ್ಯ ತೋರ್ದವ
ಕುರುವಪುರದೊಳು ನೆಲಸಿನಿಂತವ |
ಯೋಗಿರಾಜ ಶ್ರೀಪಾದ ಗುರುಪತೀ
ಅತ್ರಿನಂದನಾ ದತ್ತ ಮೂರುತಿ ||
ಅಂಬೆ ಮಾಧವ ತನಯ ನರಹರೀ
ಕ್ಷೇತ್ರ ನಿನ್ನದು ಗಾಣಗಾಪುರೀ |
ಯತಿಪತೀ ನರಸಿಂಹಸರಸ್ವತೀ
ಅತ್ರಿನಂದನಾ ದತ್ತ ಮೂರುತಿ ||
ರಾಯರಂಕರು ನಿನ್ನ ದಾಸರು
ಬಡವ ಬಲ್ಲಿದರೆಲ್ಲ ಭಕ್ತರು |
ಸರ್ವಶಕ್ತ ನೀ ಜ್ಞಾನಿಕುಲಪತೀ
ಅತ್ರಿನಂದನಾ ದತ್ತ ಮೂರುತಿ ||
ನಿನ್ನ ಚರಿತೆಯೂ ವೇದ ಸಮಬಲ
ನಿನ್ನುಪಾಸನಾ ಸುಖದ ಸವಿ ಫಲಾ |
ಸರ್ವಜನರಿಗೂ ನೀನೆ ಸದ್ಗತಿ
ಅತ್ರಿನಂದನಾ ದತ್ತ ಮೂರುತಿ ||
ಯೋಗಿ ವೇಷವೋ ಭೋಗಿ ವೇಷವೋ
ಕಂಡ ಭಕ್ತರದೆಂಥ ಭಾಗ್ಯವೋ |
ಮನಕೆನಿಲುಕದಾ ಮಧುರಮಯಚಿತೀ
ಅತ್ರಿನಂದನಾ ದತ್ತ ಮೂರುತಿ ||
ಆರು ಕೈಗಳು ಮೂರು ಮಸ್ತಕ
ಎರಡು ಕೈಗಳು ಒಂದೆಯೇ ಮುಖಾ |
ತ್ರಿಗುಣದೆರಕನೀ ವಿಶ್ವದಾಕೃತೀ
ಅತ್ರಿನಂದನಾ ದತ್ತ ಮೂರುತಿ ||
ಕರ್ಮವೆಲ್ಲವೂ ನಿನ್ನುಪಾಸನಾ
ಭೋಗವೆಲ್ಲವೂ ನಿನ್ನಭಾವನಾ |
ನೀಡು ನಿನ್ನೊಳು ಏಕರಸಮತಿ
ಅತ್ರಿನಂದನಾ ದತ್ತ ಮೂರುತಿ ||
ಒಂದರೆಕ್ಷಣಾ ನಿತ್ಯ ಸ್ಮರಣೆಯಾ
ಗೈವಭಾವಿಕಾ ನಿತ್ಯನಿರ್ಭಯ |
ಸೊಲ್ಲು ಸೊಲ್ಲಿಗೂ ನಿನ್ನಕೀರುತೀ
ಹಾಡಿಕೊಳ್ಳಲಿ ಯೋಗೀಶ ಭಾರತೀ ||

0 ಕಾಮೆಂಟ್‌ಗಳು