ದತ್ತ ಭಜನೆ - ಗುರುದತ್ತವಿಭೋ ಶ್ರೀಶದಯಾಳೋ, Gurudatta Vibho Srisha Dayalo

 || ದತ್ತ ಭಜನೆ ||



ಗುರುದತ್ತವಿಭೋ ಶ್ರೀಶ ದಯಾಳೋ |

ಎರಗುವೆನು ಯತೀಶ ಮಹೇಶ ||


ಭಕ್ತರಾರ್ತಿಯ ಕಳೆದು ಶ್ರೇಷ್ಠ ಪದವಿಯ |

ಕೊಡುವಿಯೆಂಬ ಕೀರ್ತಿಯ|ಮೂರ್ತಿದೇವ ||


ನಿನ್ನ ಧ್ಯಾನವ ಮಾಳ್ಪ ನಾನು ಕಷ್ಟವ |

ಪಡುತಲಿಹುದು ಮಾಧವ|ಉಚಿತವೇನೋ ||


ಎಂದು ಮರಣದ ಭಯವ ಕಳೆದು ಸೌಖ್ಯದಾ |

ಪದವ ಕೊಡುವೀ ಮೋಕ್ಷದ|ಮಹಾರಾಜಾ ||


ಗಾಣಗಾಪುರಾಧೀಶ ಬಾ ಕೃಪಾಕರಾ |

ಶ್ರೀಪಾದ ಗುರುವರಾ|ದಯೆಯ ತೋರೋ ||


ಅತ್ರಿಋಷಿಸುತ ಜಗನ್ನಾಥ ಮತ್ಪಿತಾ |

ಶಿವಾನಂದಸುತನುತ | ಭಜಕ ಪೋಷ ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು