ದತ್ತ ಭಜನೆ - ದತ್ತ ದಿಗಂಬರನೇ ವಂದಿಪೆ ನಾ, Datta Digambarane Vandipe Naa

 || ದತ್ತ ಭಜನೆ ||



ದತ್ತ ದಿಗಂಬರನೇ ವಂದಿಪೆ ನಾ ಕಾಯೈ

ಕರುಣಾಸಾಗರ ವಲ್ಲಭರಾಯ ||


ವಾಡಿಯ ವಾಸ ಹೇ ಜಗದೀಶಾ

ನೀಗಿಸು ಆಶಾ ಬೇಡುವೆ ಶ್ರೀಶಾ |

ಚೈತನ್ಯಾಂಬುಧಿ ಆತ್ಮ ಸ್ವರೂಪ ||


ವಿಷಯದೊಳಿರುವ ಈ ಘನ ಪ್ರೇಮ

ನಿನ್ನೊಳಗಿರಲೈ ನಿರ್ಗುಣಧಾಮ |

ಸದ್ಗುರುನಾಥಾ ಹೇ ಅವಧೂತ ||


ಸತ್ಯ ಸ್ವರೂಪ ನಿತ್ಯಾನಂದ

ಮಿಥ್ಯಾ ಕಲ್ಪನೆ ಈ ಜಗ ನಿನ್ನೊಳು |

ಬ್ರಹ್ಮಾನಂದ ಶಂಕರ ರೂಪ ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು