ಶ್ರೀ ಬಿಂದುಮಾಧವ ಸುಪ್ರಭಾತ - ಏಳು ಗುರು ಮಾಧವನೆ Elu Guru Madhavane

|| ಶ್ರೀ ಬಿಂದುಮಾಧವ ಸುಪ್ರಭಾತ ||

ರಚನೆ : ಧ್ರುವಕುಮಾರ್ ಅವಧಾನಿ (ಧೃವಣ್ಣ )

kannadabhajanlyrics.blogspot.com
kannadabhajanlyrics.blogspot.com


ಏಳು ಗುರು ಮಾಧವನೆ ಏಳು ಲಕ್ಷ್ಮೀ ಕುವರ

ಬೆಲಗೂರ ಶ್ರೀ ಬಿಂದುಮಾಧವನೇ ಏಳು

ಭಕ್ತ ಜನ ವತ್ಸಲನೆ ಶಿಷ್ಟಜನ ಪಾಲಕನೆ 

ವೀರಪ್ರತಾಪ ಬೆಳಗಾಯಿತು ಏಳು || ಪ॥ 


ಕಾಸಿದ್ದ ಹಾಲಿನೊಳು ಕೇಸರಿಯ ಬೆರಸಿಟ್ಟು 

ಚಿಗುರೆಲೆಯ ತಾಂಬುಲ ಜತೆಗೆ ಕೊಡುವೆ 

ಭಕುತ ಬಂಧುವೆ ಏಳು ದರುಶನವ ನೀಡು ಬಾ 

ಹೊತ್ತು ಬಹಳಾಯಿತೋ ಬಾರೊ ಗುರುವೆ ।1೧॥1 


ತುಳಸಿ ಮಲ್ಲಿಗೆ ಹಾರ ಜತೆಗೆ ಕದಲೀ ಫಲವ 

ನಿನಗಾಗಿ ತಂದಿಹರು ಶ್ರದ್ಧೆಯಿಂದೆ

ಪ್ರೇಮಮೂರ್ತಿಯೇ - ನಮ್ಮ ಭಕುತರೆಲ್ಲರ ಸ್ವಾಮಿ 

ನಿನ್ನ ಕರುಣಾದೃಷ್ಟಿ ಹರಿಸೊ ಇಂದೆ 

ಹೊತ್ತು ಬಹಳಾಯ್ತೇಳೋ ಬಾರೊ ತಂದೆ ।।೨।॥ 


ನಿಮ್ಮ ನೋಡಲು ಎಂದೆ ಬಂದಿಹರು ಬಾ ಇಲ್ಲಿ 

ಭಕುತಜನ ಬಗೆಬಗೆಯ ವಾದ್ಯದೊಡನೆ

ಪಾಡುತ ಕುಣಿಯುತ್ತ ನಲಿಯುತ ನಿನಗಾಗಿ 

ಕಾದಿಹರು ಏಳಯ್ಯ ತಡಮಾಡದೆ ।೩।। 


ಸ್ಥೂಲವನು ಬಿಟ್ಟಿಲ್ಲ ಸೂಕ್ಷ್ಮದರಿವೇ ಇಲ್ಲ 

ಹೀಗೆ ನೀ ಮಲಗಿದರೆ ಗತಿಯಾರು ನಮಗೆ

ಕರಣ ನಿರ್ಮಲಗೊಳಿಸೆ ಭವಭಯವ ಇಲ್ಲೆಣಿಸೆ 

ಅಂಬಿಗನು ನೀನಲ್ಲದಿನ್ನಾರು ಗುರುವೆ।|೪।। 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು