|| ಗುರು ಸ್ತುತಿ ||
![]() |
| kannadabhajanlyrics.blogspot.com |
ಗುರುಬಂದ ಹರಬಂದ ಶಿವಬಂದ ಮನೆಗೆ ।
ಪರಶಿವ ಬಂದ ಮನೆಗೆ ॥
ಎಂದೂ ಬಾರದ ಗುರು ಇಂದು ತಾ ಬಂದಾ......
ಚಿನ್ನಾದ ಹಾವುಗೆ ರನ್ನಾದ ಬೆತ್ತ ...
ಪನ್ನಂಗ ಧರರೂಪ ಚಿನ್ಮಯಾ ಬಂದ || ೧ ||
ಕುರುಡಾ ಕುಂಟರ ಕಾಲು ಕಂಗಳ ತಂದ
ಬರಡು ಗೋವಿನ ಹಾಲು ಕರೆಯುತಾ ನಿಂದ || ೨ ||
ಸಾಕ್ಷಾತ್ ಶಿವತಾನು ಭಿಕ್ಷಕೇ ಬಂದ
ಮುಕ್ತಿಯ ಕೊಡುವಂಥ ಮುಕ್ಕಣ್ಣ ಬಂದ || ೩ ||
ಭಿಕ್ಷೆಯ ನೀಡೀರಿ ಭಕ್ತೀಲಿ ಬಂದು
ಆ ಕ್ಷಣ ಬೇಡಿರಿ ವರಗಳನಿಂದು || ೪ ||
ದಯಮಾಡೋ । ದಯಮಾಡೋ ।
ದಯಮಾಡೋ ಗುರುವೇ
ದಯಮಾಡೋ । ದಯಮಾಡೋ ।
ದಯಮಾಡೋ ಪ್ರಭುವೇ
ಗುರುಬಂದ । ಹರಬಂದ । ಶಿವಬಂದ ಮನೆಗೆ ॥೫॥

0 ಕಾಮೆಂಟ್‌ಗಳು