|| ಮಂಗಳಾರತಿ ಹಾಡು ||
ರಚನೆ: ಹರಪನಹಳ್ಳಿ ಭೀಮವ್ವ(ಭೀಮೇಶ ಕೃಷ್ಣ)
ಮಂಗಳಾರತಿ ತಂದು ಬೆಳಗಿರೆ
ಅಂಬುಜಾಕ್ಷನ ರಾಣಿಗೆ || ಪ ||
ಅಂಗನೇಯರೆಲ್ಲಾ ನೆರೆದು
ಮಂಗಳಾರತಿ ಎತ್ತಿರೆ ॥ ಅ.ಪ ||
ಶುದ್ಧ ಸ್ನಾನವ ಮಾಡಿ ನದಿಯೊಳು |
ವಜ್ರ ಪೀಠದಿ ನೆಲೆಸಿದೆ |
ತಿದ್ದಿ ತಿಲಕ ತೀಡಿದಂತ |
ಮುದ್ದು ಮಂಗಳ ಗೌರಿಗೆ ॥ ೧॥
ಎರೆದು ಪೀತಾಂಬರವ ನುಡಿಸಿ |
ಸರ್ವಾಭರಣವ ತೊಡಿಸಿರೆ ॥
ಹರಳಿನೋಲೆ ಮೂಗುತಿಯನ್ನಿಟ್ಟ |
ವರ ಮಹಾಲಕ್ಷಿ ದೇವಿಗೆ ॥| ೨॥
ಉಟ್ಟ ಪೊಡವಿಯ ಕಷ್ಟ ಕಳೆವಳು |
ಕೊಟ್ಟಳು ಅರಸಿನ ಸಿರಿಯನು ॥
ಹೆತ್ತ ಕುವರ ತೋರಿದಂತ |
ಶುಕ್ರವಾರದ ಲಕ್ಷ್ಮಿಗೆ || ೩॥
ನಿಗಮ ವೇದ್ಯಳೆ ನಿನ್ನ ಗುಣಗಳ |
ಬಗೆ ಬಗೆಯಿಂದಲಿ ಸ್ತುತಿಸುವೆ |
ತೆಗೆದು ಭಾಗ್ಯವ ನೀಡು ಜಗದೊಡೆಯ |
ಭೀಮೇಷ ಕೃಷ್ಣನ ಮಡದಿಯೆ || ೪ ||

0 ಕಾಮೆಂಟ್‌ಗಳು