ಶ್ರೀ ಹನುಮತ್‌ ಸ್ತುತಿ - ವೀರ ಹನುಮ ಬಹು ಪರಾಕ್ರಮ, Hanuma Bahu Parakrama

 || ಶ್ರೀ ಹನುಮತ್‌ ಸ್ತುತಿ ||

kannadabhajanlyrics.blogspot.com
kannadabhajanlyrics.blogspot.com


ವೀರ ಹನುಮ ಬಹು ಪರಾಕ್ರಮ ಜಗದಿ ತಾ ।

ಸುಜ್ಞಾನ ಇತ್ತು ಪಾಲಿಸೆನ್ನ ಜೀವರೋತ್ತಮ ॥ಪ॥


ರಾಮ ದೂತನೆನಿಸಿಕೊಂಡೆ 

ರಾಕ್ಷಸರ ವನವನ್ನೆಲ್ಲ ಕಿತ್ತು ಬಂದೆ 

ಜಾನಕಿಗೆ ಮುದ್ರೆ ಇತ್ತು ಜಗತಿಗೆಲ್ಲ  ಹರುಷವಿತ್ತು

ಚೂಡಾಮಣಿಯ ರಾಮಗಿತ್ತು

ಮಿಲೋಕಕೆ ಮುದ್ದಿಸಿ ಮೆರೆವ


॥ ಗೋಪಿ ಸುತನ ಪಾದ ಪೂಜಿಸಿ 

ಗದೆಯ ಧರಿಸಿ ಬಕಾಸುರನ ಸಂಹರಿಸಿದೆ 

ದೌಪತಿಯ ಮೊರೆಯ ಕೇಳಿ ಮತ್ತೆ ಕೀಚಕನ್ನ ಕೊಂದು

ಭೀಮನೆಂಬ ನಾಮ ಧರಿಸಿ ಸಂಗ್ರಾಮ ಧೀರನಾಗಿ ಜಗದಿ ॥


ಮಧ್ಯ ಗೇಹನಲ್ಲಿ ಜನಿಸಿ ನೀ 

ಬಾಲ್ಯದಲ್ಲಿ ಮಸ್ಕರೀಯ ರೂಪಗೊಂಡೆ ನೀ 

ಸತ್ಯವತಿಯ ಸುತನ ಭಜಿಸಿ ಸಮ್ಮುಖದಿ ಭಾಷ್ಯ ಮಾಡಿ

ಸಜ್ಜನರ ಪೊರೆವ ಮುದ್ದುಪುರಂದರ ವಿಠಲ ದಾಸ ॥ 


 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು