|| ಹನುಮ ಸ್ತುತಿ ||
ಹರುಷದಿಂದಲಿ ಕಾಯೋ ಹನುಮಾ
ಹಾಲ ಭಾವಿಯಲ್ಲಿರುವಂಥ ಭೀಮಾ
ಗುರುಮಧ್ವರಾಯರ ಚರಣಕೊಂದಿಪೆ ನಿತ್ಯ
ಹರಿ ಸರ್ವೋತ್ತಮನೆಂಬ ಸ್ಥಿರವಾದ
ಮತಿಕೊಡು ಹನುಮ ಟಪ॥।
ಅಂಜನಾದೇವಿ ಸಂಭೂತ ಧನಂಜಯನಣ್ಣ ಅತಿ ಪ್ರಖ್ಯಾತ
ಕಂಜಲೋಚನ ರಾಮ ದೂತಾ ಕುರು ಭಂಜನ ಆನಂದ
ತೀರ್ಥ ಅಂಜೀಕಿನ್ಯಾತಕೆ ಸಂಜೀವ ರಾಯಾ
ಸೌಗಂಧಿಕಾ ಪುಷ್ಪತಂದ ಸುಂದರ ತಂದೆ ಶ್ರೀ ಹನುಮಾ ॥
ಸಾಗರ ದಾಟಿದ ಧೀರ ಧರ್ಮರಾಜನ ನಿಜ ವೃಕೋದರ
ಆ ಮಧ್ಯಗೇಹರ ಕುವರ ಹನುಮ ಭೀಮದೇವ
ಮಧ್ವಾವತಾರ ಆ ಮನೋಹರ ದಿವ್ಯ ರಾಮನಾಮಾಮೃತ
ಪ್ರೇಮದಿ ಕರುಣಿಸೋ ಸ್ವಾಮಿ ದಯಾನಿಧಿ ॥
ದೂರ ನೋಡದಿರೋ ಹನುಮ ।
ಕರಜೋಡಿಸಿ ಪ್ರಾರ್ಥಿಪೆ ಭೀಮ ।
ಆನಂದ ತೀರ್ಥರ ಪ್ರೇಮದಿಂದ
ವ್ಯಾಳೆ ವ್ಯಾಳಿಕೆ ಶ್ರೀಹರಿನಾಮಾ ।

0 ಕಾಮೆಂಟ್‌ಗಳು