ನಿನ್ನಂತೆ ನಾನಾಗಲಾರೆ ಏನು ಮಾಡಲಿ ಹನುಮ, Ninnanthe Nanagalare Enu Madali Hanuma

ನಿನ್ನಂತೆ ನಾನಾಗಲಾರೆ ಏನು ಮಾಡಲಿ ಹನುಮ



ನಿನ್ನಂತೆ ನಾನಾಗಲಾರೆ ಏನು ಮಾಡಲಿ ಹನುಮ.

ನಿನ್ನಂತಾಗದೆ ನನ್ನವನಾಗನೆ ನಿನ್ನ ಪ್ರಭು ಶ್ರೀ ರಾಮಾ..


ಹಾದಿಯ ಹಳ್ಬವೇ ದಾಟಲಸಾಧ್ಯ

ಹೀಗಿರುವಾಗ ಹನುಮ. ..

ಸಾಗರ ದಾಟುವ ಹಂಬಲ ಸಾಧ್ಯವೇ,

ಅಯ್ಯೋ ರಾಮ ರಾಮ, ಅಯ್ಯೋ ರಾಮ ರಾಮ||೧||


ಎಟುಕದ ಹಣ್ಣನು ನಾ ತರಲಾರೆ

ಮೇಲಕ್ಕೆ ಎಗರಿ ಹನುಮ..

ಸೂರ್ಯನ ಹಿಡಿವ ಸಾಹಸ ಕಿಳಿದರೆ,

ಬದುಕಿಗೆ ಪೂರ್ಣ ವಿರಾಮ...

ಬದುಕಿಗೆ ಪೂರ್ಣ ವಿರಾಮ ||೨||


ಜಗಳವ ಕಂಡರೆ ಓಡುವೆ ದೂರ,

ಎದೆಯಲಿ ಢವ ಢವ ಹನುಮಾ...

ರಕ್ಕಸರಾನ ಕನಸಲಿ ಕಂಡರು

ಆ ಕ್ಷಣ ನಾ ನಿರ್ನಾಮ ||೩||


ಅಟ್ಟವ ಹತ್ತಲು ಶಕ್ತಿಯು ಇಲ್ಲ

ಇಂಥ ದೇಹವು ಹನುಮ...

ಬೆಟ್ಟ ವನೆತ್ತುವೆ ಎಂದರೆ ಎನ್ನನು

ನಂಬುವನೆ ಶ್ರೀ ರಾಮ, ನಂಬುವನೆ' ಶ್ರೀ ರಾಮ...||೪|| 


ಕನಸಲು ಮನಸಲು ನಿನ್ನ ಉಸಿರಲು..

ತುಂಬಿದೆ ರಾಮನ ನಾಮ...

ಚಂಚಲ ವಾದ ನನ್ನಿ ಮನದಲ್ಲಿ

ನಿಲ್ಲುವರಾರೋ ಹನುಮ...

ನಿಲ್ಲುವರಾರೋ ! ಹನುಮ ||೫||


ಭಕ್ತಿಯು ಇಲ್ಲ ಶಕ್ತಿಯು ಇಲ್ಲ..

ಹುಟ್ಟಿದೆ ಏತಕೋ ಕಾಣೆ...

ನೀ ಕೃಪೆ ಮಾಡದೆ ಹೋದರೆ "ಹನುಮ

ನಿನ್ನ ರಾಮನ ಆಣೆ.. ನಿನ್ನ ರಾಮನ ಆಣೆ ||೬||








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು