ಹನುಮ ಸ್ತುತಿ - ಓಡಿ ಬಾರೈ ಮಾರುತಿ, Odi Barai Maruthi

 || ಹನುಮ ಸ್ತುತಿ ॥ 

ರಾಗ : ಷಣ್ಮುಖಪ್ರಿಯ

ತಾಳ : ಆದಿ 



॥ ಓಡಿ ಬಾರೈ ಮಾರುತಿ । ಪಾಡುತ ಬಾರೈ |

ರಾಮನ ಸಂಕೀರ್ತಿ | ಓಡಿ ಬಾರೈ ॥ ಪ ||


ರಾಮನ ಅಭಯದಿ । ಬಾಲಸುತ್ತಿ ಮೇಲೆ ಕುಳಿತು |

ರಾಮನ ನಾಮವ । ರಾವಣ೦ಗರುಹಿ

ಭೂಮಿಜ ಮಾತೆಯ ರಾಮಗೆ ನೀ ನೀಡೋ |

ರಾಮನ ಪದ ಪಿಡಿದು । ಸುಖಿಯಾಗೋ ರಾವಣ ॥

ರಾಮನ ಪದ ಹಿಡಿದು|ಸುಖಿಯಾಗೋ

ರಾವಣನೆಂದವನೆ|| ಓಡಿ ಬಾರೈ ॥ ೧.


ಲಂಕೆಯಂ|ಬೆಂಕಿಯಂ|ಅಂಕೆಯಿಲ್ಲದೆ ಸುಟ್ಟು||

ಬಿಂಕದಿ ಹಾರಿ ಬಂದು|ರಾಮನ ಬಳಿಸೇರಿ ॥

ಪಂಕಜ ಮಾತೆಯ । ಕುರುಹನು ತಾ ನೀಡಿ ॥

ರಾಮನ ಪದ ಹಿಡಿದು । ಸುಖಿಯಾದ ಶ್ರೀ ಹನುಮ ॥

ರಾಮನ ಪದ ಹಿಡಿದು|ಸುಖಿಯಾದ ಬೆಲಗೂರು ಹನುಮ||

ಓಡಿ ಬಾರೈ ॥ ೨.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು