|| ಹರಿ ಸ್ತುತಿ ||
ರಾಗ : ಬೃಂದಾವನ ಸಾರಂಗ
ತಾಳ : ಆದಿತಾಳ
ರಾಧೇಶ್ಯಾಮ್ ರಾಧೇಶ್ಯಾಮ್
ರಾಧಾ ಮಾಧವ ಮೇಘ ಶ್ಯಾಮ್
ಆದಿನಾರಾಯಣ ರಾಧೇ ಶ್ಯಾಮ್
ಅನಾದಿ ಪುರುಷ ಮೇಘ ಶ್ಯಾಮ್
ವಾಸುದೇವಹರಿ ರಾಧೇ ಶ್ಯಾಮ್
ವಾಸುಕಿ ಶಯನನೆ ಮೇಘ ಶ್ಯಾಮ್ ||೧||
ದೇವಕಿ ತನಯ ರಾಧೇ ಶ್ಯಾಮ್
ದೇವ ದೇವ ಹರಿ ಮೇಘ ಶ್ಯಾಮ್ ॥
ಭಾವಜನಯ್ಯನೆ ರಾಧೇ ಶ್ಯಾಮ್
ಗೋವಳ ಪ್ರಿಯಹರಿ ಮೇಘ ಶ್ಯಾಮ್ ॥೨॥
ಪೂತನಿ ಮರ್ಧನ ರಾಧೆ ಶ್ಯಾಮ್
ಶಕಟ ಸಂಹಾರ ಮೇಘ ಶ್ಯಾಮ್
ಮಾತುಳ ಧ್ವಂಸಿ ರಾಧೇ ಶ್ಯಾಮ್ ।
ಅನಾಥ ರಕ್ಷಕ ಮೇಘ ಶ್ಯಾಮ್ ॥
ಮುರಳಿ ಮನೋಹಶ ರಾಧೇ ಶ್ಯಾಮ್ |
ನರಕಾಂತಕ ಹರಿ ಮೇಘ ಶ್ಯಾಮ್ |
ಕರುಣಾಕರ ಹರಿ ರಾಧೇ ಶ್ಯಾಮ್ |
ಕರುಣಿಸಿ ಪೊರೆ ಹರಿ ಮೇಘ ಶ್ಯಾಮ್ ॥
ಪಾಂಡವ ಪ್ರಾಣನೆ ರಾಧೇ ಶ್ಯಾಮ್ ॥
ಪಾಂಡವ ತ್ರಾಣನೆ ಮೇಘ ಶ್ಯಾಮ್ |
ಪಾಂಡವ ರಕ್ಷಕ ರಾಧೇ ಶ್ಯಾಮ್ |
ಕೌರವ ಶಿಕ್ಷಕ ಮೇಘ ಶ್ಯಾಮ್ ॥
ಗೋಪೀಜಾತನೆ ರಾಧೇ ಶ್ಯಾಮ್ |
ಗೋಪೀನಾಥನೆ ಮೇಘ ಶ್ಯಾಮ್ |
ಗೋಪಿಕ ವಲ್ಲಭ ರಾಧೇ ಶ್ಯಾಮ್ |
ಗೋಕುಲ ನಂದನ ಮೇಘ ಶ್ಯಾಮ್ ॥
ಶ್ರೀಪರಮೇಶನೆ ರಾಧೇ ಶ್ಯಾಮ್ |
ಕೇಶವ ಅಚ್ಯುತ ಮೇಘ ಶ್ಯಾಮ್ |
ದೋಷ ಕ್ಷಮಿಸಿ ಪೊರೆ ರಾಧೇ ಶ್ಯಾಮ್ |
ದಾಸ ಕೇಶವನುತ ಮೇಘ ಶ್ಯಾಮ್ ॥
0 ಕಾಮೆಂಟ್‌ಗಳು