|| ಸುಬ್ರಹ್ಮಣ್ಯ ಸ್ತುತಿ ||
ಅವನಿಯ ಭಾರವ ನಿಳುಹಲು ಶಿವನಿಗೆ
ಕುಮಾರನಾಗಿ ತಾ ಜನಿಸಿದನು
ದಿನಮಣಿಯಂದದಿ ಕಾಂತಿಯಕೂಡಿ
ಪ್ರಕಾಶ ಮಾನದಿ ಉದಿಸಿದನೂ || ೧ ||
ದುರುಳರ ಹಾವಳಿ ಪರಿಹರಿಸೆನ್ನಲು
ಸುರಸೇನಾಧಿಪ ನೆನಸಿದನೂ
ಶರವಣ ನಾಮದಿ ಸುರರಿಗೆ ಒಲಿದೂ
ಕರುಣಾಕರ ತಾನಾಗಿಹನೂ || ೨ ||
ಕಾಂಚನಾದ್ರಿಯ ನಂತ ಶಿಖರದಿ
ಸಂತಸದಲಿ ತಾ ರಾಜಿಪನೂ
ನಿಂತು ಬೇಡುವಾನಂತ ಭಕ್ತರಿ
ಗ್ವಂಚನೆ ಇಲ್ಲದೆ ವರ ಕೊಡುತಿಹನೂ || ೩ ||
ಸಾಗರದಲಿ ತಾ ನೋಲೈಸುತಲಿ
ಭೂಮ್ಯಾದಖಿಲದ ಸಲಹುವನೂ
ಧೀರತೆಯಲಿ ಸರ್ವಲೋಕ ನಾಯಕ
ಸ್ವಾಮಿ ದೇವ ಪ್ರಭುವೆನಿಸಿಹನೂ || ೪ ||
ರತ್ನ್ನ ಸಿಂಹಾಸನದಲಿ ಮಂಡಿಸಿ
ಉತ್ತಮ ಮೂರುತಿ ಯಾಗಿಹನೂ
ಶಕ್ತಿ ಶೂಲಾಂಕುಶಗಳ ಪಿಡಿದೂ
ನಿತ್ಯೋತ್ಸವ ಪ್ರಿಯ ತಾನಿಹನೂ || ೫ ||
ನಿತ್ಯ ನಿಯಮಾನೇ ಮಾರಾಧನ ಸತ್ಯ
ಸಾರ್ವಭೌಮನೆನಿಸಿಹನೂ
ಸ್ವಶಕ್ತಿಯ ತೇಜದಿ ಭಕ್ತಿ ಮೂಡಿದ
ಭಕ್ತರ ಹೃದಯದಿ ನೆಲಸಿಹನೂ || ೬ ||
ಶಾರದ ಕೃತನಾದರ ಕಾವ್ಯದ ಅಮೃತ
ರುಚಿಯಾ ನುಣಿಸುವನು
ಆರಗ ಕುಲದೇಳಿಗೆ ಸ್ತಂಭದ
ದೇವ ಷಣ್ಮುಖ ಸ್ವಾಮಿಯಾಗಿಹನೂ || ೭ ||
0 ಕಾಮೆಂಟ್‌ಗಳು