ತತ್ವ ವಿಚಾರ ಪ್ರಕರಣ - ಜ್ಞಾನವೊಂದೇ ಸಾಕು ಮುಕ್ತಿಗೆ Jnanavonde Saku Mukrhige

|| ತತ್ವ ವಿಚಾರ ಪ್ರಕರಣ ||

kannadabhajanlyrics.blogspot.com
kannadabhajanlyrics.blogspot.com



ಜ್ಞಾನವೊಂದೇ ಸಾಕು ಮುಕ್ತಿಗೆ |

ಮಿಕ್ಕಾದ ಮೌನ ಧ್ಯಾನ ನೇಮಗಳೆಲ್ಲ ಭುಕ್ತಿಗೇ(ಭಕ್ತಿಗೆ)

ನಾನು ನನ್ನದು ಎಂಬ ಜಗದಭಿ।

ಮಾನವಲ್ಲವೇ ನಿಖಿಲ ಬಂಧನ।

ಮಾನಸದ ಕಲ್ಪಿತವೇ ಸರಿಯನು।

ಮಾನವಿನ್ನಿದಕ್ಕಿಲ್ಲವೆಂಬುವ ॥ಅ.ಪ.॥


ಶುಕ್ತಿಯಲಿ ರಜ ತತ್ತ್ವ ತೋರ್ಪಂತೆ॥

ಈ ಜಗವು ಮಾಯಾ।

ಶಕ್ತಿಯಿಂ ಕಾಣುವುದು ನಿಜದಂತೇ।

ಯುಕ್ತಿಯಿಂದೀ ನಾಮರೂಪ।

ವ್ಯಕ್ತ ಜಾತವ ಕಳದು ವ್ಯಕ್ತಾ | ವ್ಯಕ್ತ ಲಕ್ಷಣ।

ಶಕ್ತಿ ಕಾರ್ಯೋನ್ಮುಕ್ತನೇ ನಾನೆಂಬ ಸಮ್ಯ || ೧ ||


ಮೃತ್ತಿನಲಿ ಕಲ್ಪಿಸಿದ ವಸ್ತುಗಳು। ಬೇರೆನಿಸಿ ತೋರದೆ।

ಮೃತ್ತೆಯಾಗಿಯೆ ಬೆಳಗುವಂದದಲೀ।

ತತ್ತ್ವದಾಶ್ರಯದಿಂದ ಕಲ್ಪಿತ।

ಮೊತ್ತವಂ ನೆರೆ ಕಳಿಯೆ ಭ್ರಮೆಯಿಂ।

ಚಿತ್ತಿನಲಿ ಕಲ್ಪಿಸಿದ ಜಗವಿದು |

ಚಿತ್ತೆಯಾಗುವುದೆಂಬ ಪೂರ್ಣ॥ ೨ ||


ಪರಮ ಸದ್ಗುರು ಶಂಕರಾರ್ಯನಲೀ।ಮನವಿಟ್ಟು ತತ್ವ್ವವ।

ನರಿತು ನಿಜಗುರು ಚರಣಕಮಲದಲೀ!

ನಿರುಪಮಿತ ನಿರ್ಗುಣ ನಿರಂಜನ।

ನಿರಘ ನಿರ್ದ್ವಯ ನಿತ್ಯ ನಿರ್ಮಲ |

ನಿರವಧಿಕ ನಿರ್ಮಾಯ ನಿಷ್ಕ್ರಿಯ 

ನಿರತಿಶಯ ನಾನೆಂಬ ದಿವ್ಯ || ಜ್ಞಾನ ||





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು