ಗುರು ಶಂಕರ ಭಗವನ್ ಸ್ತುತಿ - ಪಶುಪಕ್ಷಿ ಮೊದಲಾದ ಜನ್ಮವ ಕಳೆಕೊಂಡೆ ಫಲವೇನದರಿಂದ

|| ಗುರು ಶಂಕರ ಭಗವನ್ ಸ್ತುತಿ ||

kannadabhajanlyrics.blogspot.com
kannadabhajanlyrics.blogspot.com



ಪಶುಪಕ್ಷಿ ಮೊದಲಾದ।

ಜನ್ಮವ ಕಳೆಕೊಂಡೆ ಫಲವೇನದರಿಂದ |

ಅಸಮಾನವಾದ। ಮಾನವ ಜನ್ಮಪಡಕೊಂಡೆ।

ಫಲವೇನದರಿಂದ ॥ಪಲ್ಲವಿ| 


ಅದರೊಳುತ್ತಮವಾದ। ಪುರುಷನೇ ನೀನಾದೆ।

ಫಲವೇನದರಿಂದ |

ಮುದದಿಂದದರೊಳ್‌ ನಾ ವಿಪನೆಂದೆನಿಸಿದೆ।

ಫಲವೇನದರಿಂದ || ೧ ||


ಪರ ವೇದಮಾರ್ಗ ನಿಷ್ಠೆಯನನುಸರಿಸಿದೇ

ಫಲವೇನದರಿಂದ।

ಹಿರಿದಾ ದಾಗಮ ಶಾಸ್ತ್ರಂಗಳನೆಲ್ಲ।

ಕಲಿತೇನು ಫಲವೇನದರಿಂದ || ೨ ||


ಬೇಕಾದ ಯಜ್ಞವ್ರತಗಳನ್ನೆಲ್ಲ ಮಾಡಿದೆ।

ಫಲವೇನದರಿಂದಾ।

ನಾಕ ಲೋಕಕೆ ಪೋಗಿ ರಂಭೆಯೋಳ್‌ ಸುಖಿಸಿದೆ!

ಫಲವೇನದರಿಂದ || ೩ ||


ಕುಂಭಿಸಿ ಮರುತನ। ಬಿಡದೆ ಬಂಧಿಸಿದೇನು।

ಫಲವೇನದರಿಂದ 

ಇಂಬಾಗಿ ತನುವ ಶತಕಲ್ಪ ನಿಲ್ಲಿಸಿದೇನು ।

ಫಲವೇನದರಿಂದಾ || ೪ ||


ಮಾನವರೊಳಗತಿ । ಮಾನ್ಯನೆಂದೆನಿಸಿದೇ ।

ಫಲವೇನದರಿಂದಾ।

ನಾನಾ ದಾನಗಳ ನಿಧಾನಿಸಿ ಮಾಡಿದೆ।

ಫಲವೇನದರಿಂದಾ ||೫ ||


ಗಂಗಾದಿ ಪುಣ್ಯತೀರ್ಥದೊಳೆಲ್ಲ ಮುಳುಗಿದೇ।

ಫಲವೇನದರಿಂದ |

ಅಂಗದೊಳಿರುವೊ ಪಾಪವನ್ನೆಲ್ಲ ಕಳಕೊಂಡೆ।

ಫಲವೇನದರಿಂದ || ೬ ||


ಸೇರಿ ಸುಶುಮ್ನೆಯ। ತಾರಕವನು ಕಂಡೇ।

ಫಲವೇನದರಿಂದ।

ತೋರಿತು ನಿನ್ನ ಬೆಳಕೇ ಬೇರೆ ವಿಧವಾಗಿ|

ಫಲವೇನದರಿಂದ ||೭||


ಗುರುಶಂಕರಾರ್ಯನೊಳ್‌। ಬೆರದೇಕನಾಗಿ!

ನಿನ್ನಯ ನಿಜವನು ಕಾಣದೇ।

ಮರಣ ಜನ್ಮವ ಕಳೆಯದ ಕರ್ಮ ಮಾಡಲು!

ಫಲವೇನದರಿಂದ ||೮||ಪಶು ಪಕ್ಷಿ ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು