ತೇರು ಬರುತಿದೆ ನೋಡು
ತೇರು ಬರುತಿದೆ ನೋಡೊ, ಸ್ವಾಮಿ ಕುಮಾರ
ದೇವ ದೇವನ, ತೇರು ಬರುತಿದೆ ನೋಡೂ||೧||
ತೇರು ಬರುತಿದೆ ಸ್ವಾಮಿ ಸುಬ್ರಹ್ಮಣ್ಯ ಮೂರ್ತಿಯ
ತೇರು ಬರುತಿದೆ ನೋಡು ||೨||
ಕಟ್ಟೀ ಕದಲೀಕ೦ಂಬ ಹಚ್ಚನೆಯ ತೋರಣ
ಕುಚ್ಚು ಹೂವಿನ ಸರ ಸಿಸ್ತೀನ
ರಭಸದಲೀ ನೋಡು ತೇರು ||೩||
ಹೊಂಗಳಸ ಗೋಪುರದಿ ಬಂಗಾರ ಕವಚದಲೀ
ಶೃ೦ಗಾರ ಸಿಂಹಾಸನದಲಿ
ಸ್ಕಂದನಿರುವ ನೋಡು ತೇರು ||೪||
ಝಣ ರುಣಗೆಜ್ಜೆ ಸದ್ದಿನಲಿ
ಗಣ ಗಣ ಗಂಟೇ ಶಬ್ಧದಲಿ
ಢಣ ಢಣ ಜಾಗಟೇ ನಾದದಲೀ
ನೋಡು ತೇರು||೫||
ಮೌರಿವಾದ್ಯ ಮೊಳಗುತಲಿ
ನಗಾರಿ ಡೋಲು ನಾದದಲೀ
ಚೌರಿ ಛಾಮರ ಸೇವೆಯಲ್ಲಿ
ನೋಡು ನೋಡು ತೇರು ||೬||
ಕರ್ಪೂರದಾರತೀ ಕೈಗೊಳ್ಳುತಲೀ
ಒಪ್ಪವ ಧೂಮ ಘಮದಲೀ
ಕಪ್ಪ ಕಾಣಿಕೆ ರಾಸಿಯಲೀ ನೋಡು ತೇರು||೭||
ವಲ್ಲೀಶನಿಹ ತೇರು ಎಲ್ಲೇಲ್ಲು ಜಯತೇರು
ನಿಲ್ಲದೇ ಬರುತಿದೆ ಮಹಾತೇರು
ನೋಡು ತೇರು||೮||
ಗೋವಿಂದ್ಯೋ ಧ್ವನಿಕೂಡಿ
ನಮೋ ಸ್ವಾಮಿ ಪಾದಕ್ಕೆಂದು
ಸ್ವಾಮಿ ಗೋವಿಂದೋ ಜಯವೆಂದೂ
ನೋಡು ತೇರು || ೯||
ಆರಗಾಕುಲ ತೇರು ಸ್ವಾಮಿ ನಾರ್ಮುಖ ತೇರು
ಶಾರದಾ ಜೀವ ಜ್ಯೋತಿ ತೇರು
ತೇರು ಬರುತಿದೆ ನೋಡು ॥೧೦॥
ಊರಿನ ಶುಭ ತೇರು ಆರಗಾಕುಲದಾ ತೇರು
ದೇವ ಷಣ್ಮುಖ ತೇರು ಜಯ
ತೇರು ನೋಡು ತೇರು ||೧೧||
0 ಕಾಮೆಂಟ್‌ಗಳು