|| ತತ್ವ ವಿಚಾರ ಪ್ರಕರಣ ||
kannadabhajanlyrics.blogspot.com, belaguru swamiji photo |
ತನ್ನ ತಾ ತಿಳಿಯಬೇಕು।
ಕೇಳದರಿಂದೀ ಜನ್ಮವ ಕಳಿಯಬೇಕು ॥ಪ||
ಮುನ್ನಿರ್ದ ಶಿವಜೀವ। ಭಿನ್ನತ್ತವಳಿದು ಮ।
ಹೋನ್ನತಾನ೦ದ ಸ್ನ ಜಿನ್ನಯ ಭಾವದಿ ॥ಅ.ಪಲ್ಲವಿ॥
ಮರಣ ಜನ್ಮಂಗಳಲ್ಲಿ ಜಾಗರ ಸ್ಪಪ್ನ।
ಕ್ಷರ ಮೂರ್ಛಾವಸ್ಥೆಯಲಿ ಅರಿಯೇ ನಾನರಿಯುಯೆ
ಅರಿತೆನೆಂಬೆಡೆಯಲ್ಲಿ | ಪರದಿನ ಮಾಸ।
ಸಂವತ್ಸರ ಕಲ್ಪಾದಿಗಳಲ್ಲಿ ||೧||
ಘನ ತಿಮಿರದಿ ಕುಳಿತು। ಮುಸಿಕಿಟ್ಟು |
ಕಣ್ಣನು ಮುಚ್ಚುತೊಳ ಬೆರತು।
ಕನಸಿನ ಪರಿಯೊಳು ಮನಸಿನ ಭಾವದಿ।
ಜನಿಸಿತೋರುವ ಜಗತ್ತಿನ ತೋರ್ಕೆ ಕಾಲದಿ ||೨||
ಮನದಲಿ ವಿಧಿ ಸೇರಲು | ಮಾನಸವದು |
ದಿನ ವಿಷಯದಿ ಕೂಡಲು ಧನ ಧಾನ್ಯ ವನಿತೆ।
ವಾಹನ ವಸ್ತ್ರಾಭರಣಂಗ |ಳನುಭವದಿಂದ ।
ಸಂಜನಿಸುವ ಸುಖದೊಳು॥೩||
ಕದಿದಮೆನಿಸಿಕೊಳ್ಳುತ। ತೋರುವ ನಾನಾ।
ವಿಧ ವಸ್ತುಗಳ ನೋಡುತಾ। ಇದು ಜಗವಿದು ರೂಪ।
ವಿದು ದೀಪವಿದು ನೇತ್ರವಿದು ಬುದ್ಧಿ |
ಎಂದಿತು ವಧಿಸುವ ನುಡಿಯೊಳು॥
ಮರೆಯೊಳ್ ಸತ್ವವು ಕೂಡಲು |
ಸತ್ಕರ್ಮ ಸಂತತಿಗಳಧಿಕಮಾಗಲು |
ಪತಿ ಭಕ್ತಿಯೊಳು ಗೌರಿ ಪತಿ ಪದಗಳ ಪೂಜಿ |
ಸುತ ನಮಿಸುತ ನಿಂದು | ನುಡಿಸುವ ಕಾಲದಿ ||೫||
ನಿರುತವಿ ಬುದ್ಧಿಯೊಳು | ತಾಮಸಗುಣ।
ಕರಿಗೊಂಡು ನೆಲೆಗೊಳಲು।
ಅರಿವರ್ಗದಿಂದನುಸರಿಸಿ ಸಂಜನಿಸುವ |
ದುರಿತ ಕರ್ಮಗಳು | ಗೋಚರಿಸುವ ಸಮಯದಿ ||೬||
ಹರಿಯದೀ ಪ್ರಾರಬ್ಧವ | ಮೀರದೆ ನಾನಾ।
ಪರಿಯೊಳು ಕುಣಿದಾಡುವ |
ಕರಣ ಧರ್ಮಂಗಳನರಿತಲ್ಲಿ ಬೆರೆಯದೆ |
ಗುರುಶಂಕರಾರಭನೋಳ್ |
ಬೆರದೇಕನಾಗೀ॥ ತನ್ನ ತಾ ತಿಳಿಯಬೇಕು॥೭||
0 ಕಾಮೆಂಟ್‌ಗಳು